ಸಿಎ ಸಿಪಿಟಿ ಫಲಿತಾಂಶ: ಆಳ್ವಾಸ್ ಪಿಯು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Update: 2016-07-19 11:57 GMT

ಮೂಡುಬಿದಿರೆ, ಜು.19: 2016ರ ಜೂನ್ ತಿಂಗಳಲ್ಲಿ ನಡೆದ ಸಿಎ – ಸಿಪಿಟಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು, ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯದಲ್ಲಿಯೇ ಮುಂಚೂಣಿಯನ್ನು ಕಾಯ್ದುಕೊಂಡಿದೆ.

ದೇಶದ ಒಟ್ಟು ಫಲಿತಾಂಶವು 38.98 ಶೇ. ಆಗಿದ್ದು ಆಳ್ವಾಸ್ ಪದವಿಪೂರ್ವ ಕಾಲೇಜು 71.26 ಶೇ. ಫಲಿತಾಂಶವನ್ನು ಪಡೆದು ದಾಖಲೆಯ ಸಾಧನೆಯನ್ನು ಮಾಡಿದೆ. ಒಟ್ಟು 87 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 62 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಕಾಯ್ದುಕೊಂಡಿದ್ದಾರೆ.

ಮುಹಮ್ಮದ್ ತಬಿಶ್ ಹಸ್ಸನ್ 177 ಅಂಕ, ಎಂ.ಆಯಿಷಾ 167 ಅಂಕ ಹಾಗೂ ನಾಗರಾಜ ಮಹಾಬಲೇಶ್ವರ ಹೆಗ್ಡೆ 166 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಶಂಸಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News