ಮಟ್ಕಾ ನಿರತ ನಾಲ್ವರ ಬಂಧನ
Update: 2016-07-19 21:35 IST
ಮಂಗಳೂರು, ಜು. 19: ನಗರ ಸಿಸಿಬಿ ಪೊಲೀಸರು ನಗರದ ವಿವಿಧ ದಾಳಿ ನಡೆಸಿ ಮಟ್ಕಾ ನಿರತ ನಾಲ್ವರನ್ನು ಬಂಧಿಸಿದ್ದಾರೆ.
ಪಂಪ್‌ವೆಲ್‌ನ ಖಾಸಗಿ ಹೊಟೇಲ್ ಸಮೀಪ ಮಟ್ಕಾ ನಿರತರಾಗಿದ್ದ ಉಜ್ಜೋಡಿಯ ರತನ್ ಕುಮಾರ್ (46) ನನ್ನು ಬಂಧಿಸಿ ಮಟ್ಕಾಕ್ಕೆ ಸಂಗ್ರಹಿಸಿದ್ದ 51,030 ರೂ. ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ಎದುರು ಮಟ್ಕಾ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಕಂಕನಾಡಿಯ ಯತೀಶ್ (45), ಉರ್ವ ಮಾರಿಗುಡಿಯ ಸುರೇಶ್ ಆಚಾರಿ (44), ಕಂಕನಾಡಿಯ ಧರ್ಮಪಾಲ್ ಶೆಟ್ಟಿ (60) ಎಂಬವರನ್ನು ಬಂಧಿಸಿ ಅವರಿಂದ 21,500 ರೂ. ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.