×
Ad

ವದಂತಿಯಿಂದ ಕಲ್ಲಡ್ಕದಲ್ಲಿ ಆತಂಕದ ಸ್ಥಿತಿ

Update: 2016-07-19 22:04 IST

ವಿಟ್ಲ, ಜು.19: ಕಲ್ಲಡ್ಕ ಮೇಲಿನ ಪೇಟೆಯ ಶೌಚಾಲಯದಲ್ಲಿ ಪ್ರವಾಸಿಗನೋರ್ವನೊಂದಿಗೆ ಚಿಲ್ಲರೆ ಪಾವತಿ ವಿಷಯಕ್ಕೆ ಸಂಬಂಧಿಸಿ ನಡೆದ ಮಾತಿನ ವಿನಿಮಯ ಪ್ರಕರಣವೊಂದು ನಾನಾ ವದಂತಿಗಳಿಗೆ ಕಾರಣವಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ರಾತ್ರಿ ವೇಳೆ ನಡೆದಿದೆ.
 
ಬಳಿಕ ಇದೇ ವಿಷಯಕ್ಕೆ ಸಂಬಂಧಿಸಿ ಕಲ್ಲಡ್ಕದಲ್ಲಿ ಭಿನ್ನ ಕೋಮಿನ ನಡುವೆ ಘರ್ಷಣೆ ನಡೆದು ಬಾಟ್ಲಿ ಎಸೆತ ನಡೆದಿದೆ ಎಂಬ ಊಹಾ ಪೋಹದ ವದಂತಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಡಿ ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News