×
Ad

ಮುಂಬೈಯಲ್ಲಿ ಅಪಘಾತ: ಶಿರ್ವ ಮೂಲದ ಉದ್ಯಮಿ ಮೃತ್ಯು

Update: 2016-07-19 23:48 IST

 ಉಡುಪಿ, ಜು.19: ಮುಂಬೈಯಲ್ಲಿ ಮಂಗಳವಾರ ಬೆಳಗ್ಗೆ 8:50ರ ಸುಮಾರಿಗೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಶಿರ್ವ ಮೂಲದ ಉದ್ಯಮಿ ಶಿರ್ವ ಮೆಹಮ್ಮೂದ್ ಹಸನ್ ಎಂಬವರ ಮಗ ಅಬ್ದುಲ್ ಹಮೀದ್ ಮೆಹಮೂದ್(45) ಎಂಬವರು ಮೃತಪಟ್ಟಿದ್ದಾರೆ.
ಇನ್ನೋವಾ, ಸ್ವಿಫ್ಟ್ ಡಿಸೈರ್ ಹಾಗೂ ಟ್ಯಾಕ್ಸಿ ಮಧ್ಯೆ ಉಂಟಾದ ಅಪಘಾತದಲ್ಲಿ ಇನ್ನೋವಾದಲ್ಲಿದ್ದ ಅಬ್ದುಲ್ ಹಮೀದ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಈ ಅಪಘಾತದಲ್ಲಿ ಟ್ಯಾಕ್ಸಿಯಲ್ಲಿದ್ದ ಇಬ್ಬರು ಮೃತಪಟ್ಟು, ಡಿಸೈರ್‌ನಲ್ಲಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈಯಲ್ಲಿ ಕೈಗಾರಿಕೋದ್ಯಮಿಯಾಗಿರುವ ಇವರು ಹಲವು ವರ್ಷಗಳಿಂದ ಮುಂಬೈಯ ಮಝ್‌ಗಾಂವ್‌ನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News