×
Ad

ದಸಂಸ ಖಂಡನೆ

Update: 2016-07-19 23:51 IST

ಉಡುಪಿ, ಜು.19: ಮುಂಬೈಯ ಪಾರಂಪರಿಕ ಹಾಗೂ ಐತಿಹಾಸಿಕ ಕಟ್ಟಡವಾಗಿರುವ ಅಂಬೇಡ್ಕರ್ ಭವನ ಹಾಗೂ ಬುದ್ಧ ಭೂಷಣವನ್ನು ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆಡವಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ತಾಲೂಕು ಸಮಿತಿ ಖಂಡಿಸಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಆರಂಭಿಸಿರುವ ಈ ಕಟ್ಟಡವು ಚಳುವಳಿಯೊಂದರ ಕೇಂದ್ರವಾಗಿತ್ತು. ಇಂತಹ ಐತಿಹಾಸಿಕ ಕಟ್ಟಡ ಕೆಡಹುವ ಮೂಲಕ ಸರಕಾರ ದಲಿತ ದೌರ್ಜನ್ಯ ಮಾಡಲು ಹೊರಟಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News