×
Ad

ಕಳವು ಆರೋಪ: ಆರೋಪಿ ಸೆರೆ

Update: 2016-07-19 23:52 IST

ಮಂಜೇಶ್ವರ, ಜು.19: ಇಲ್ಲಿಗೆ ಸಮೀಪದ ಬಾಯಿಕಟ್ಟೆ ನಿವಾಸಿ ಮುಹಮ್ಮದ್ ರಫೀಕ್ ಎಂಬವರ ಮಾಲಕತ್ವದ ಅಂಗಡಿಯಿಂದ ಅಡಕೆ ಹಾಗು ಕರಿಮೆಣಸು ಕಳವುಗೈದ ಆರೋಪದ ಮೇಲೆ ಪೈವಳಿಕೆ ಸಮೀಪದ ಬಾಯಿಕಟ್ಟೆ ನಿವಾಸಿ ಜಯರಾಂ ನೋಂಡ (28)ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಈತ ಬಾಳಿಗ ಅಝೀಝ್ ಕೊಲೆ ಪ್ರಕರಣದ ಆರೋಪಿಯೂ ಆಗಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.
ಕಳವುಗೈದ ಕರಿಮೆಣಸು ಹಾಗೂ ಅಡಕೆಯನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News