×
Ad

ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಕಿಸೆಗಳ್ಳರ ಸೆರೆ

Update: 2016-07-19 23:59 IST

ಕಾಸರಗೋಡು, ಜು.19: ಇಲ್ಲಿನರೈಲ್ವೆ ನಿಲ್ದಾಣದಲ್ಲಿ ಕಿಸೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀ ಸರು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.
ಬಂಧಿತರನ್ನು ಉಳಿಯತ್ತಡ್ಕ ನ್ಯಾಷನಲ್ ನಗರ ಕ್ವಾಟರ್ಸ್‌ನಅಶ್ರಫ್ (26) ಮತ್ತು ನಾಯಮ್ಮಾರಮೂಲೆಯ ಮುಹಮ್ಮದ್ ಹರ್ಷದ್ (24) ಎಂದು ಗುರುತಿಸಲಾಗಿದೆ. ಇವರು ಕಳವುಗೈದಿದ್ದಾರೆ ಎನ್ನಲಾದ ಪರ್ಸ್, ನಗದು ಹಾಗೂ ರೈಲು ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ಮಧ್ಯಾಹ್ನ ಅಸ್ಸಾಂ ನಿವಾಸಿಯಾಗಿರುವ ಕನಯ್ ಬೋಸ್ ಎಂಬವರ ಪರ್ಸನ್ನು ಇವರು ಎಗರಿಸಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News