ಪೋಕೆಮನ್ ಮೊಬೈಲ್ ಗೇಮ್ ಹರಾಂ : ಸೌದಿ ಹಿರಿಯ ವಿದ್ವಾಂಸರ ಸಮಿತಿ
Update: 2016-07-20 14:08 IST
ಜಿದ್ದಾ, ಜು.20: ಫೋಕೆಮನ್ ಮೊಬೈಲ್ ಗೇಮ್ ಹರಾಂ ಎಂದು ಸೌದಿ ಹಿರಿಯ ವಿದ್ವಾಂಸರ ಸಮಿತಿ ನವೀಕರಿಸಿ ಫತ್ವಾ ಹೊರಡಿಸಿದೆ.
ಜೂಜು ರೀತಿಯ ಇಂತಹ ಆಟವನ್ನು ನಿಷೇಧಿಸಿ ಹದಿನಾರು ವರ್ಷಗಳ ಹಿಂದೆ ಫತ್ವಾ(ನಂ.21,758) ನೀಡಲಾಗಿತ್ತು ಇದೀಗ ಅದೇ ಪೋಕೆಮನ್ ಮೊಬೈಲ್ ಗೇಮ್ ನಿಷೇಧವನ್ನು ನವೀಕರಿಸಲಾಗಿದೆ. ಈ ಜೂಜು ರೀತಿಯ ಆಟಕ್ಕೆ ಇಸ್ಲಾಂನಲ್ಲಿ ನಿಷೇಧವಿದೆ.
ಈಗಿನ ಆಟವು ಹಿಂದಿನ ಆಟದ ನವೀಕರಣವಾಗಿದೆ ಎಂದು ಸೌದಿ ಹಿರಿಯ ವಿದ್ವಾಂಸರ ಸಮಿತಿಯ ಸದಸ್ಯರಾದ ಶೇಕ್ ಸಾಲೆಹ್ ಅಲ್-ಫೊಝಾನ್ ತಿಳಿಸಿದ್ದಾರೆ.