×
Ad

ಅಂಬೇಡ್ಕರ್ ನೆಹರೂ ಅಧ್ಯಯನ ಕಮ್ಮಟ ರಚನೆ

Update: 2016-07-20 17:47 IST

 ಮಂಗಳೂರು, ಜು. 20: ಸಾಮಾಜಿಕ ಅಭದ್ರತೆ, ಮತೀಯ ದ್ವೇಷ ರಾಜಕಾರಣವನ್ನು ಸಮರ್ಥವಾಗಿ ಎದುರಿಸಲು ವೈಚಾರಿಕವಾಗಿ ಯುವಜನತೆಯನ್ನು ಸಂಘಟಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಪುರಭವನದಲ್ಲಿ ನಡೆದ ಕಾಂಗ್ರೆಸ್‌ಪ್ರತಿನಿಧಿಗಳ ಸಮಾವೇಶದಲ್ಲಿ ಅಂಬೇಡ್ಕರ್ ನೆಹರೂ ಅಧ್ಯಯನ ಕಮ್ಮಟ ರಚಿಸಲಾಯಿತು. ಅಂಬೇಡ್ಕರ್ ಹಾಗೂ ನೆಹರು ಕನಸಿನ ಸಾಂಸ್ಕೃತಿಕ ಘನತೆ, ಪ್ರಜಾತಾಂತ್ರಿಕ ಸಮಾನತಾವಾದಿ, ಧರ್ಮ ಸಹಿಷ್ಣು ಸಮಾಜ ಹಾಗೂ ಸೆಕ್ಯುಲರ್ ಧೋರಣೆಯ ಭಾರತವನ್ನು ತಳಮಟ್ಟದಿಂದ ಕಟ್ಟುವುದೇ ಈ ಅಧ್ಯಯನ ಕಮ್ಮಟದ ಗುರಿಯಾಗಿದೆ. ಕಮ್ಮಟದ ಕರಾವಳಿ ಕರ್ನಾಟಕದ ಸಂಚಾಲಕರಾಗಿ ಬಂಟ್ವಾಳದ ಲ್ಯೂಕ್‌ಮನ್ ಅವರನ್ನು ನೇಮಕ ಮಾಡಲಾಯಿತು. ಸಹ ಸಂಚಾಲಕರಾಗಿ ಮಂಗಳೂರಿನ ಪ್ರೇಮನಾಥ ಬಲ್ಲಾಳ್ ನೇಮಕಗೊಂಡಿದ್ದಾರೆ. ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಪ್ರಹ್ಲಾದ್ ಬೆಳ್ಳಿಪಾಡಿ ಪುತ್ತೂರು, ನಜ್ಹರ್ ಶಾ ಉಳ್ಳಾಲ, ಚಂದ್ರಹಾಸ್ ಕೊಣಾಜೆ, ಅಕ್ಬರ್ ಅಲಿ ಬೆಳ್ತಂಗಡಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News