ಕೆನರಾ ಫೋಟೊಗ್ರಾಫರ್ಸ್ ವಾರ್ಷಿಕ ಮಹಾ ಸಭೆ
ಬಂಟ್ವಾಳ, ಜು. 20: ಬಂಟ್ವಾಳ ವಲಯ ಯೋಗ್ಯ ವಲಯ ಜಿಲ್ಲೆಗೆ ಮಾದರಿ. ಹಲವು ಪ್ರಥಮ ಕಾರ್ಯಕ್ರಮಗಳು ಆರಂಭವಾದದ್ದು ಬಂಟ್ವಾಳದಿಂದ. ಸಹಕಾರ ತತ್ವದಲ್ಲೇ ಈ ಸಂಘಟನೆ ಬಲಯುತವಾಗಿದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಜಿಲ್ಲಾಧ್ಯಕ್ಷ ಜಗನ್ನಾಥ್ ಶೆಟ್ಟಿ ನುಡಿದರು.
ಅವರು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ., ಉಡುಪಿ ಜಿಲ್ಲೆ ಬಂಟ್ವಾಳ ವಲಯದ 17ನೆ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕವಾದ ದುಡಿಮೆ ಮತ್ತು ಸಂಘಟನೆ ಈ ವಲಯದ ಯಶಸ್ಸಿಗೆ ಹಾದಿಯಾಗಿದೆ. ವಿವಿದೋದ್ಧೇಶ ಬ್ಯಾಂಕಿನ ಅಭಿವೃದ್ಧಿಗಾಗಿ ಸದಸ್ಯರ ಬಲ ಬೇಕಾಗಿದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ವಾಸುದೇವ ರಾವ್ ನುಡಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ವಿಠಲ್ ಚೌಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ್, ಜಿಲ್ಲಾ ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್, ಜಿಲ್ಲಾ ಪತ್ರಿಕಾ ಪ್ರತಿನಿಧಿ ಸತೀಶ್ ಎಸ್. ಕುಮಾರ್ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಆನಂದ್ ಎನ್.ಸ್ವಾಗತಿಸಿದರು. ಉಪಾಧ್ಯಕ್ಷ ರಾಜೇಂದ್ರ ಗತ ವರ್ಷದ ಮಹಾಸಭೆಯ ವರದಿ ಮತ್ತು ಕಾರ್ಯದರ್ಶಿ ಹರೀಶ್ ಕುಂದರ್ ಈ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ರವಿ ಕಲ್ಪನೆ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಹರೀಶ್ ಮಾಣಿ ವಂದಿಸಿ ಕಲಾವಿದ ಎಚ್ಕೆ ನಾಯನಾಡು ಕಾರ್ಯಕ್ರಮ ನಿರೂಪಿಸಿದರು.