952ನೆ ಮದ್ಯವರ್ಜನ ಶಿಬಿರ ಸಮಾರೋಪ

Update: 2016-07-20 12:29 GMT

ಬಂಟ್ವಾಳ, ಜು. 20: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ, ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ವಗ್ಗ ವಲಯ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ವಗ್ಗ ವಲಯ, ಯುವಕ ಮಂಡಲ ಸರಪಾಡಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರ, ವಗ್ಗ ವಲಯ ನವಜೀವನ ಸಮಿತಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 952ನೆ ಮದ್ಯವರ್ಜನ ಶಿಬಿರದ ಸಮಾರೋಪ ಇತ್ತೀಚೆಗೆ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರದ ಸಭಾಂಗಣದಲ್ಲಿ ಜರಗಿತು.

ಪ್ರಗತಿಪರ ಕೃಷಿಕ ರಾಜೇಶ ನಾಕ್ ಉಳಿಪಾಡಿಗುತ್ತು ಮುಖ್ಯ ಅತಿಥಿಯಾಗಿ ಮಾತನಾಡಿ ಡಾ. ಡಿ.ವಿರೇಂದ್ರ ಹೆಗ್ಗಡೆ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಂತೆ ಮಾರ್ಗದರ್ಶನದ ಮದ್ಯವರ್ಜನ ಶಿಬಿರವು ಅನೇಕ ಜನರ ಜೀವನವನ್ನು ಉತ್ತಮ ಕೌಶಲ್ಯಯುತ ಜೀವನವನ್ನಾಗಿ ರೂಪಿಸಿದೆ. ಅವರ ಉತ್ತಮ ಕಾರ್ಯಗಳಿಂದ ಜನಜೀವನ ಸ್ವರ್ಗಸದೃಶವಾಗಿದೆ.ಮದ್ಯ ಮುಕ್ತರಿಗೆ ಸಮಾಜದಲ್ಲಿ ಗೌರವವಿದೆ ಎಂದು ಹೇಳಿದರು.

ಶ್ರಮಜೀವಿ ಕಾರ್ಮಿಕರಿಗೆ ಮದ್ಯ ಪಾನದಂತಹ ದುಶ್ಚಟಗಳಿಂದ ದೈಹಿಕ ಸಾಮರ್ಥ್ಯ ಕುಂಠಿತಗೊಳ್ಳುವುದು. ಇದರಿಂದ ಅನಾರೋಗ್ಯ ಮತ್ತು ಆರ್ಥಿಕ ಮಟ್ಟ ಕುಸಿಯುವುದು. ದುಶ್ಚಟಗಳಿಂದ ದೂರವಾದಾಗ ಕುಟುಂಬದ ನೆಮ್ಮದಿ ಸಾಧ್ಯ ಎಂದು ಹೇಳಿದರು.

ಬಾಚಕೆರೆ ಶ್ರೀ ದುರ್ಗಾಪರಮೆಶ್ವರಿ ದೇವಿ ಮಂದಿರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅಧ್ಯಕ್ಷತೆ ವಹಿಸಿದ್ದರು. ಜನ ಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್ ಕುಟುಂಬ ದಿನ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಂಟ್ವಾಳ ಯೋಜನಾಧಿಕಾರಿ ಕು.ಸುನಿತಾ ನಾಯಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಚಂದ್ರ ಬೊಳ್ಮಾರ್, ಯುವಕ ಮಂಡಲ ಸರಪಾಡಿಯ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ, ಶಿಬಿರಾಧಿಕಾರಿ ಗಣೇಶ್ ಆಚಾರ್ಯ, ಬಂಟ್ವಾಳ ಗ್ರಾಮಾಂತರ ಠಾಣಾ ಎಎಸ್‌ಐ ಬಿ.ರಮೇಶ್, ವಲಯ ಒಕ್ಕೂಟದ ಅಧ್ಯಕ್ಷ ಮೋಹನ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ಒಕ್ಕೂಟಗಳ ಪದಾಧಿಕಾರಿಗಳು ಮತ್ತು ಸದಸ್ಯರು, ವಗ್ಗ ವಲಯದ ಸೇವಾ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ರಾಧಾಕೃಷ್ಣ ರೈ ಕೊಟ್ಟುಂಜ ಸ್ವಾಗತಿಸಿದರು. ವಗ್ಗ ವಲಯ ಮೇಲ್ವಿಚಾರಕಿ ಭವಾನಿ ವಂದಿಸಿದರು.ಯುವಕ ಮಂಡಲದ ಕಾರ್ಯದರ್ಶಿ ಕಿರಣ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News