×
Ad

ಸಲಫಿ ದಅ್ ವಾ ಟ್ರೈನಿಂಗ್ ಕೋರ್ಸ್ ಪುನರಾರಂಭ

Update: 2016-07-20 18:59 IST

ಮಂಗಳೂರು, ಜು. 20: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು ಇದರ ಅಧೀನ್ದ ಸಂಸ್ಥೆಯಾಗಿರುವ ಸಲಫಿ ವಿದ್ಯಾಭ್ಯಾಸ ಮಂಡಳಿಯ ಆಶ್ರಯದಲ್ಲಿ ನಡೆಯುವ ದಅ್ವಾ ಟ್ರೈನಿಂಗ್ ಕೋರ್ಸ್‌ನ ನೂತನ ಶೈಕ್ಷಣಿಕ ವರ್ಷ ಜುಲೈ 25ರಿಂದ ಪುನರಾರಂಭಗೊಳ್ಳಲಿದೆ.

ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು, ಆಸಕ್ತರು ನಗರದ ಇಬ್ರಾಹೀಂ ಖಲೀಲ್ ಮಸೀದಿ ಸಮೀಪದ ದಾರುಲ್ ಖೈರ್‌ನಲ್ಲಿ ದಾಖಲಾತಿ ಪಡೆಯಬಹುದಾಗಿದೆ. ವಾರದಲ್ಲಿ ಐದು ದಿನ ತರಬೇತಿ ನಡೆಯಲಿದ್ದು, ದಾಖಲಾತಿ ಪಡೆಯುವವರ 16 ವಯಸ್ಸಿಗಿಂತ ಮೇಲ್ಪಟ್ಟವರಾಗಿರಬೇಕು. ಹಾಗೂ ಕುರ್‌ಆನ್ ಪಾರಾಯಣ ಮಾಡಲು ಅರ್ಹತೆ ಹೊಂದಿರಬೇಕು ಎಂದು ಸಲಫಿ ಎಜುಕೋಶನ್ ಬೋರ್ಡ್‌ನ ಅಧ್ಯಕ್ಷ ವೌಲವಿ ಮುಸ್ತಫಾ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News