×
Ad

ಕುಸಿತದ ಭೀತಿಯಲ್ಲಿ ಮೂಡುಬಿದಿರೆ ತರಕಾರಿ ಮಾರುಕಟ್ಟೆ

Update: 2016-07-20 19:35 IST

ಮೂಡುಬಿದಿರೆ,ಜು.20: ಕಳೆದ 5 ವರ್ಷಗಳಿಂದ ಮೂಡುಬಿದಿರೆಯ ಜನತೆ ನೂತನ ಮಾರುಕಟ್ಟೆಯ ನಿರೀಕ್ಷೆಯಲ್ಲಿದ್ದರೂ ಇನ್ನು ಕೂಡಾ ನೂತನ ಮಾರುಕಟ್ಟೆಗೆ ಕಾಲ ಕೂಡಿ ಬಂದಿಲ್ಲ. ಆದರೆ ಇದೀಗ ಇರುವ ತರಕಾರಿ ಮಾರುಕಟ್ಟೆಯ ಕೆಲವು ಕಟ್ಟಡಗಳ ಮೇಲ್ಚಾವಣಿಗಳು, ಗೋಡೆ ಕುಸಿತದ ಹಂತಕ್ಕೆ ತಲುಪಿದ್ದು, ವ್ಯಾಪಾರಿಗಳು ಅಪಾಯದ ಭೀತಿಯಲ್ಲಿದ್ದಾರೆ.

   ಬಿಜೆಪಿ ಸರಕಾರವಿದ್ದಾಗ ನೂತನ ಮಾರುಕಟ್ಟೆಗೆ ಅಂದಿನ ಸಚಿವ ಕೃಷ್ಣಪಾಲೇಮಾರ್ ಅವರು ಶಂಕುಸ್ಥಾಪನೆಗೈದಿದ್ದರು. ಆದರೆ ಹೊಸ ಮಾರುಕಟ್ಟೆಯ ಬಗ್ಗೆ ಪುರಸಭೆಯ ಯೋಜನೆಗಳು  ರೂಪುಗೊಂಡರೂ ಒಂದಲ್ಲ ಒಂದು ವಿಘ್ನಗಳು ಎದುರಾಗಿ ಸಧ್ಯ ಈ ಯೋಜನೆ ಅನುಷ್ಠಾನಗೊಳ್ಳುವ ಸಾಧ್ಯತೆಯು ಇನ್ನೂ ದೂರದಲ್ಲಿದೆ.

 ಮಾರುಕಟ್ಟೆ ಪ್ರವೇಶಿಸುವಾಗ ಸಿಗುವ ಬಲಬದಿ0ು ಕಟ್ಟಡ ನಾದುರಸ್ತಿ0ುಲ್ಲಿದೆ. ಕಟ್ಟಡದ ರೀಪು, ಪಕ್ಕಾಸು ಗೆದ್ದಲು ಹಿಡಿದು ಸದಾ ಅಪಾ0ುದ ಸ್ಥಿತಿ0ುಲ್ಲಿದೆ. ಜೋರು ಗಾಳಿ ಮಳೆ ಬಂದರಂತು ಎಲ್ಲಿ ತಲೆ ಮೇಲೆ ಛಾವಣಿ ಕುಸಿದು ಬೀಳಬಹುದೆಂಬ ಆತಂಕ ವ್ಯಾಪಾರಿಗಳದ್ದು. ಮಳೆಯಿಂದ ರಕ್ಷಣೆ ಪಡೆ0ುಲು ಪ್ಲಾಸ್ಟಿಕ್ ಟರ್ಪಾಲನ್ನು ಹಾಕಲಾಲಾಗಿದೆ.

ಮೂಡುಬಿದಿರೆ ತರಕಾರಿ ಮಾರುಕಟ್ಟೆಯಿಂದ ಪುರಸಭೆಗೆ ಒಳ್ಳೆಯ  ಆದಾಯವಿದೆ. ಈ ವರ್ಷ ರೂ 28.26 ಲಕ್ಷ ಮಾರುಕಟ್ಟೆ ಏಲಂನಿಂದ ಪುರಸಭೆಗೆ ಆದಾಯ ಬಂದಿದೆ. ಇಷ್ಟು ಆದಾಯ ತರುವ ಮಾರುಕಟ್ಟೆ ಬಗ್ಗೆ ಪುರಸಭೆ ಮಾತ್ರ ನಿರ್ಲಕ್ಷ್ಯ ವಹಿಸಿದೆ ಎಂಬುದು ವ್ಯಾಪಾರಿಗಳ ಆರೋಪ.

   ಮೀನು ಮಾರುಕಟ್ಟೆಯಿಂದ ಈ ಬಾರಿ ಪುರಸಭೆಗೆ ಏಲಂನಿಂದ ಬಂದ ಆದಾ0ು ರೂ 3.52 ಲಕ್ಷ. ಅಲ್ಪ ಆದಾಯ ಕೊಡುವ ಮೀನು ಮಾರುಕಟ್ಟೆಗೆ ಛಾವಣಿಗೆ ಶೀಟ್ ಅಳವಡಿಕೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಲು ಉತ್ಸುಕ ತೋರಿದ ಪುರಸಭೆ ತರಕಾರಿ ಮಾರುಕಟ್ಟೆ ಬಗ್ಗೆ ಮಲತಾಯಿ ಧೋರಣೆ ಅನಸರಿಸುತ್ತಿದೆ ಎಂದು ಪುರಸಭಾ ಸದಸ್ಯರಾದ ಮನೋಜ್ ಶೆಟ್ಟಿ ಮತ್ತು ಉಮೆಶ್ ದೇವಾಡಿಗ ಈಚೆಗೆ ಪುರಸಭೆ ಮಾಸಿಕ ಸಭೆ0ುಲ್ಲಿ ಆರೋಪಿಸಿದ್ದಾರೆ. ಆದರೆ ತರಕಾರಿ ಮಾರುಕಟ್ಟೆಯನ್ನು ದುರಸ್ತಿಪಡಿಸುವ ಬಗ್ಗೆ ಪುರಸಭೆ ಇನ್ನೂ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲವಾದ್ದರಿಂದ ತರಕಾರಿ ವ್ಯಾಪಾರಿಗಳು ಆತಂಕದ ಸ್ಥಿತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News