×
Ad

ಸುಳ್ಯ: ಡೆಂಗ್ ಗೆ ವಿದ್ಯಾರ್ಥಿ ಬಲಿ

Update: 2016-07-20 20:07 IST

ಸುಳ್ಯ,ಜು.20: ರಕ್ತ ಹೀನತೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯೋಬ್ಬ ಡೆಂಗ್ ಜ್ವರಕ್ಕೆ ತುತ್ತಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

 ಅರಂತೋಡು ಅಡ್ಕಬಳೆ ನಿವಾಸಿ ರುದ್ರಪ್ಪರವರ ಪುತ್ರ ಬಿಪಿನ್ (14) ಸುಮಾರು 10 ವರ್ಷದಿಂದ ರಕ್ತ ಹೀನತೆಯಿಂದ ಬಳಲುತ್ತಿದ್ದ. ಅರಂತೋಡು ನೆಹರೂ ಸ್ಮಾರಕ ಹೈಸ್ಕೂಲ್‌ನಲ್ಲಿ 9ನೆ ತರಗತಿಯಲ್ಲಿ ಕಲಿಯುತ್ತಿದ್ದ ಬಿಪಿನ್‌ಗೆ 21 ದಿನಕ್ಕೆ ಒಂದು ಬಾಟಲಿ ರಕ್ತವನ್ನು ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನೀಡಲಾಗುತ್ತಿತ್ತು. ಇತ್ತೀಚೆಗೆ ಬಿಪಿನ್‌ಗೆ ಜ್ವರ ಬಂದು ಅದು ಡೆಂಗ್ಯೂಗೆ ಸೇರ್ಪಡೆಯಾಗಿತ್ತು. ರಕ್ತಹೀನತೆ ಮತ್ತು ಡೆಂಗ್ ಬಾಧೆ ಉಲ್ಬಣಿಸಿ ಬಿಪಿನ್ ಮೃತಪಟ್ಟಿದ್ದಾನೆ.ತಂದೆ ರುದ್ರಪ್ಪ, ತಾಯಿ ಅಡ್ಕಬಳೆ ಅಂಗನವಾಡಿ ಶಿಕ್ಷಕಿ ಧನಲಕ್ಷ್ಮೀ, ತಮ್ಮ ರಿತಿನ್‌ನನ್ನು ಅಗಲಿದ್ದಾನೆ.

7 ವರ್ಷದಿಂದ ಸಹೋದರನಿಗೆ ಚಿಕಿತ್ಸೆ: ಬಿಪಿನ್ ಸಹೋದರ ರಿತಿನ್‌ಗೆ ಕೂಡಾ ರಕ್ತಹೀನತೆ ಇದ್ದು ಮಂಗಳೂರು ಕೆ.ಎಂ.ಸಿ.ಯಲ್ಲಿ 21 ದಿನಕ್ಕೆ ಒಮ್ಮೆ ಒಂದು ಬಾಟಲಿ ರಕ್ತ ನೀಡಲಾಗುತ್ತಿದೆ.ರಿತಿನ್ 6ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. 4 ವರ್ಷ ಪ್ರಾಯದಲ್ಲಿ ಪ್ರಾರಂಭವಾದ ಈ ಕಾಯಿಲೆಗೆ 7 ವರ್ಷದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳಿಗೂ ಈ ವಿಚಿತ್ರ ಕಾಯಿಲೆ 4 ವರ್ಷ ಪ್ರಾಯ ಇರುವಾಗಲೇ ಪ್ರಾರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News