×
Ad

ಭಟ್ಕಳ: ಸದ್ಯೋಜಾತ ಶ್ರೀಗಳಿಂದ ಚಿತ್ರಾಪುರ ಮಠದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ

Update: 2016-07-20 20:15 IST

ಭಟ್ಕಳ,ಜು.20: ತಾಲೂಕಿನ ಶಿರಾಲಿಯ ಶ್ರೀ ಚಿತ್ರಾಪುರ ಮಠದಲ್ಲಿ ಚಾತುರ್ಮಾಸ್ಯಕಾರ್ಯಕ್ರಮವನ್ನು ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಕೈಗೊಂಡಿದ್ದು ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಸಂಜೆ ಶ್ರೀಗಳಿಂದ ಧರ್ಮ ಸಭೆ ನಡೆಯಿತು.

 ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಚಾತುರ್ಮಾಸ್ಯ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6 ಗಂಟೆಯಿಂದ ಸುಪ್ರಭಾತ, 6.30ಕ್ಕೆ ಜಲಾಭಿಷೇಕ, 8 ಗಂಟೆಗೆ ಸಾಮೂಹಿಕ ಸಾಧನಾ ಪಂಚಕರ್ಮ, ಗಾಯತ್ರಿ ಅನುಷ್ಟಾನ, 9.30 ರಿಂದ 11.30ರ ತನಕ ಸಾಧಕರಿಂದ ಭಜನಾ ಸೇವೆ ನಡೆಯಿತು. ನಂತರ 11.30 ರಿಂದ ಮಹಾ ಪೂಜಾ, ಪಾದುಕಾ ಪೂಜಾ, ತೀರ್ಥ ಪ್ರಸಾದ ವಿತರಣೆ, ಶ್ರೀ ಭಿಕ್ಷಾ ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ಮಠದಲ್ಲಿ ನಡೆದಿದ್ದು ನೂರಾರು ಭಕ್ತರು ಭಾಗವಹಿಸಿದ್ದರು,

ಸಂಜೆ 3 ರಿಂದ 4 ಗಂಟೆಯತನಕ ವಿಮರ್ಷೆ ಮತ್ತು ಪರಾಮರ್ಷೆ, 6 ರಿಂದ 7 ಗಂಟೆಯತನಕ ಸಾಧಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 7 ಗಂಟೆಗೆ ದೀಪ ನಮಸ್ಕಾರ, ಪರಮಪೂಜ್ಯ ಸ್ವಾಮೀಜಿಯವರಿಂದ ನಿತ್ಯ ಪೂಜಾ ಕಾರ್ಯಕ್ರಮಗಳು ಜರುಗಿದ್ದು ಸಂಜೆ ಶ್ರೀಗಳಿಂದ ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗಿದವು.ರಾತ್ರಿ ಮಂಗಳಾರತಿ, ಅಷ್ಟಾವಧಾನ ಸೇವಾ ಮ್ತು ಪ್ರಸಾದ ಭೋಜನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News