×
Ad

ಪುತ್ತಿಗೆ: ಪಂಚಾಯಿತಿ 100 ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ

Update: 2016-07-20 20:24 IST

ಮೂಡುಬಿದಿರೆ,ಜು.20: ಪಂಚಾಯತ್-100 ಬಾಪೂಜಿ ಸೇವಾ ಕೇಂದ್ರಕ್ಕೆ ಪುತ್ತಿಗೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ ಅಡಿಗಳ್ ಶ್ರೀನಿವಾಸ್ ಭಟ್ ಪಂಚಾಯಿತಿ ಆರ್‌ಟಿಸಿಯನ್ನು ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಶೆಟ್ಟಿಯವರಿಗೆ ಚಾಲನೆ ನೀಡಲಾಯಿತು. ಸಂಪಿಗೆ ಚರ್ಚ್‌ನ ಧರ್ಮಗುರು ರೆ.ಫಾ ಅಪೋಲಿನಾರೀಸ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

ಜಿ.ಪಂ ಸದಸ್ಯ ಸುಚರಿತ ಶೆಟ್ಟಿ ವಸತಿ ಯೋಜನೆ ಕೆಲಸದ ಆದೇಶ ಪತ್ರವನ್ನ ಫಲಾನುಭಗಳಿಗೆ ವಿತರಿಸಿದರು.

ಉಪಾಧ್ಯಕ್ಷೆ ಶುಭಾ.ಆರ್.ಹೆಬ್ಬಾರ್ ಉಪಸ್ಥಿತರಿದ್ದರು.

ಪಿಡಿಒ ಮಾರ್ಶೆಲ್ ಡಿ’ಸೋಜಾ ಸ್ವಾಗತಿಸಿದರು. ಸಿಬ್ಬಂದಿ ಸಂಜೀವ್ ನಾಯ್ಕಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News