×
Ad

ಮಂಗಳೂರು: ಜೂಜಾಟ - 20 ಮಂದಿ ಬಂಧನ

Update: 2016-07-20 20:29 IST

 ಮಂಗಳೂರು, ಜು. 20: ನಗರದ ಹಂಪನಕಟ್ಟೆಯಲ್ಲಿರುವ ಹೇಮಾವತಿ ಬಿಲ್ಡಿಂಗ್‌ನ ಒಂದನೇ ಮಹಡಿಯಲ್ಲಿರುವ ಮಿಲೇನಿಯಂ ರಿಕ್ರಿಯೇಶನ್ ಕ್ಲಬ್ ನಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ 20 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

     ಇಸ್ಪೀಟ್ ಎಲೆಯಿಂದ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರು ಪಡೆದ ಮಾಹಿತಿಯನ್ನು ಆಧರಿಸಿ ಕ್ಲಬ್ ಗೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಒಟ್ಟು 20 ಜನರನ್ನು ಬಂಧಿಸಿ ಅವರಿಂದ 1,10,700 ರೂ. ಹಾಗೂ ಜೂಜಾಟಕ್ಕೆ ಉಪಯೋಗಿಸಿದ್ದ ಮೂರು ಮರದ ಟೇಬಲ್ ಗಳು ಮತ್ತು 20 ಚಯರ್‌ಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

 ಪೊಲೀಸ್ ಆಯುಕ್ತರ ಆದೇಶದಂತೆ, ಪೊಲೀಸ್ ಉಪ-ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್‌ಐ ಶ್ಯಾಮ್ ಸುಂದರ್.ಎಚ್.ಎಂ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News