ಭಟ್ಕಳದ ಅಬ್ದುಲ್ ಮನ್ನಾನ್ ಮಿಸ್ಬಾ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ
Update: 2016-07-20 20:40 IST
ಭಟ್ಕಳ,ಜು.20: ಅಂಜುಮಾನ್ ಕಾಲೇಜಿನ ಹಳೆ ವಿದ್ಯಾರ್ಥಿ ಅಬ್ದುಲ್ ಮನ್ನಾನ್ ಮಿಸ್ಬಾ ಚಾರ್ಟರ್ಡ್ ಎಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾನೆ ಎಂದು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ ತಿಳಿಸಿದ್ದಾರೆ.
ಅಂಜುಮಾನ್ ಸಂಸ್ಥೆಯಲ್ಲಿ ಎಲ್.ಕೆ.ಜಿ.ಯಿಂದಲೇ ವಿದ್ಯಾಭ್ಯಾಸ ಮಾಡಿದ ಈತ ಅಂಜುಮಾನ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಿಂದ ಬಿ.ಕಾಂ.ಪದವಿಯನ್ನು ಪಡೆದಿದ್ದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದೂ ತಿಳಿಸಿರುವ ಅವರು ಅಂಜುಮಾನ್ ಸಂಸ್ಥೆ ಎಲ್ಲಾ ತರಹದ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು ಗುಣಮಟ್ಟದ ಶಿಕ್ಷಣ ಲಭ್ಯ ಎಂದೂ ತಿಳಿಸಿದ್ದಾರೆ.