ದುಬೈ: 75 ಮಹಡಿಗಳ ಕಟ್ಟಡದಲ್ಲಿ ಬೆಂಕಿ
Update: 2016-07-20 20:47 IST
ದುಬೈ, ಜು. 20: ದುಬೈಯ 75 ಮಹಡಿಗಳ ಜನವಸತಿ ಕಟ್ಟಡದಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮರೀನಾ ಜಿಲ್ಲೆಯಲ್ಲಿರುವ ಸುಲಾಫ ಟವರ್‌ನಲ್ಲಿ ಕಿಟಿಕಿಯಿಂದ ಹೊರಗೆ ಜಿಗಿದ ಬೆಂಕಿ ಜ್ವಾಲೆಗಳು ಮೇಲಿನ ಅಂತಸ್ತುಗಳತ್ತ ಧಾವಿಸಿತು ಹಾಗೂ 10-15 ಮಹಡಿಗಳು ಸುಟ್ಟು ಹೋದಂತೆ ಕಾಣುತ್ತಿವೆ ಎಂದು ಅದು ಹೇಳಿದೆ.
ಬಳಿಕ ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸಿದವು.