ಭಟ್ಕಳ: ಕುಮಟಾ ವನ್ನಳಿಯಲ್ಲಿ ಮೀನುಗಾರನ ಮೃತದೇಹ ಪತ್ತೆ
ಭಟ್ಕಳ,ಜು.20: ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕಾದೋಣಿಯೊಂದು ಸಮುದ್ರ ಮಧ್ಯದಲ್ಲಿ ಮುಳುಗಿದ ಪರಿಣಾಮ ನೀರುಪಾಲಾಗಿದ್ದ ಇಬ್ಬರು ಮೀನುಗಾರರ ಪೈಕಿ ಓರ್ವನ ಮೀನುಗಾರನ ಮೃತದೇಹ ಬುಧವಾರ ವನ್ನಳ್ಳಿ ಸಮುದ್ರಕಿನಾರೆಯಲ್ಲಿ ದೊರಕಿದ್ದು ಇನ್ನೋರ್ವ ವ್ಯಕ್ತಿ ಕಣ್ಮರೆಯಾಗಿದ್ದಾರೆ.
ಮೃತ ಮೀನುಗಾರ ಭಟ್ಕಳ ತೆಂಗಿನಗುಂಡಿಯ ಅತ್ತಾರ್ ಮೊಹಲ್ಲಾ ನಿವಾಸಿ ಮುಹಮ್ಮದ್ ಹಸನ್ ಆದಮ್(28) ಎಂದು ಗುರುತಿಸಲಾಗಿದೆ.ಕಣ್ಮರೆಯಾಗಿರುವ ಮೀನುಗಾರನನ್ನುಕುಮಟಾತಾಲೂಕಿನ ವನ್ನಳ್ಳಿಯ ಅಬ್ದುಲ್ ಹಸನ್ ಅಲಿ(40) ಎಂದು ತಿಳಿದುಬಂದಿದೆ.
ಒಟ್ಟು 5 ಮಂದಿ ಮೀನುಗಾರರತಂಡ ಮಂಗಳವಾರದಂದು ಕುಮಟಾದ ವನ್ನಳ್ಳಿ ಸಮುದ್ರದಲ್ಲಿ ಮೀನುಗಾರಿಕೆಗೆಂದು ತೆರಳಿದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ದೋಣಿಯು ನಡು ಸಮುದ್ರದಲ್ಲಿ ಮುಳುಗಿದ್ದು ಇವರಲ್ಲಿ ಮೂವರು ಮೀನುಗಾರರು ದಡ ಸೇರುವಲ್ಲಿ ಯಶಸ್ವಿಯಾಗಿದ್ದರೆ,ಇಬ್ಬರೂ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು.ಇವರಲ್ಲಿ ಓರ್ವನ ಮೃತದೇಹ ಇಂದು ದೊರಕಿದೆ.ಇನ್ನೋರ್ವ ವ್ಯಕ್ತಿಗಾಗಿ ಹುಡುಕಾಟ ಜಾರಿಯಲ್ಲಿದೆ.
ಕುಮಟಾ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.