ದೇವಸ್ಥಾನಕ್ಕೆ ನುಗ್ಗಿ ಕಳವು
Update: 2016-07-20 23:45 IST
ಕಾರ್ಕಳ, ಜು.20: ಬೈಲೂರು ಪೇಟೆ ಬಳಿಯ ಶ್ರೀಮಾರಿಯಮ್ಮ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಐದು ಸಾವಿರ ರೂ. ವೌಲ್ಯದ ಉಚ್ಚಂಗಿ ದೇವರ ಕಂಚಿನ ಮುಖವಾಡವನ್ನು ಕಳವುಗೈದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.