×
Ad

ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Update: 2016-07-20 23:46 IST

 ಕಾಸರಗೋಡು, ಜು.20: ಡಿವೈಎಫ್‌ಐ ಕಾರ್ಯಕರ್ತನೋರ್ವನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉದುಮ ಮಾಂಗಾಡ್‌ನಲ್ಲಿ ನಡೆದಿದೆ
ಮಾಂಗಾಡ್ ಅಂಬಾಪುರದ ಸುಧಾಕರನ್(28) ಮೃತಪಟ್ಟವರು. ಸುಧಾಕರನ್ ಸೋಮವಾರದಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಸ್ನೇಹಿತನ ಮನೆಯ ಬಳಿ ಆತನ ಸ್ಕೂಟರ್ ಪತ್ತೆಯಾಗಿತ್ತು. ಸಂಶಯಗೊಂಡು ಶೋಧ ನಡೆಸಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಬೇಕಲ ಠಾಣಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News