×
Ad

ಜು. 23ರಿಂದ 30: ಶ್ರೀ ಮದ್ಭಗವದ್ಗೀತಾ ಪ್ರವಚನ ಮಾಲೆ

Update: 2016-07-20 23:50 IST

ಮಂಗಳೂರು, ಜು. 20: ಸುರತ್ಕಲ್‌ನ ಶಾರದಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಹಾಗೂ ಶಾರದಾ ಮಾತೃ ಮಂಡಳಿಯ ವತಿಯಿಂದ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ವಾನ್ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ಶ್ರೀ ಮದ್ಭಗವದ್ಗೀತಾ ಪ್ರವಚನ ಮಾಲೆ-6 ಕಾರ್ಯಕ್ರಮ ಜು. 23ರಿಂದ 30ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಬುಧವಾರ ನಗರದಲ್ಲಿ ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಎನ್.ಕೃಷ್ಣ ಶೆಟ್ಟಿ, ಜು. 23ರಂದು ಕಾರ್ಯಕ್ರಮವನ್ನು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಪ್ರತಿದಿನ ಪ್ರವಚನಕ್ಕೆ ಮೊದಲು ಮಹಿಳಾ ಮಂಡಳಿಗಳಿಂದ ಭಜನೆ ನಡೆಯಲಿದೆ. ಜು.30ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀರಾಮ ರಾವ್, ಸದಸ್ಯ ವೈ.ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News