×
Ad

ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಾಗೃತ ದಳ ದಾಳಿ

Update: 2016-07-20 23:51 IST

 ಕಾಸರಗೋಡು, ಜು.20: ಕಾಸರಗೋಡು, ಹೊಸದುರ್ಗ ಮತ್ತು ನೀಲೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಾಗೃತ ದಳ ದಾಳಿ ನಡೆಸಿದೆ.
ನೋಂದಣಿ ಶುಲ್ಕ ಹೆಚ್ಚಳ ಮತ್ತು ಸ್ಟಾಂಪ್ ಪೇಪರ್‌ಗಳ ದರ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಆಸ್ತಿ ನೋಂದಾಯಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಕಚೇರಿ ಸಿಬ್ಬಂದಿ ಲಂಚ ಪಡೆಯುವ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಹೊಸದುರ್ಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಸೈ ಕೆ.ವಿ.ರಘುರಾಮನ್, ಕಾಸರಗೋಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿಜಿಲೆನ್ಸ್ ಸಿ.ಐ.ಪಿ.ಬಾಲಕೃಷ್ಣನ್ ನಾಯರ್ ಮತ್ತು ನೀಲೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿಜಿಲೆನ್ಸ್ ಇನ್‌ಸ್ಪೆಕ್ಟರ್ ಅನಿಲ್ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳೂ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News