ಚಕ್ರ ಸ್ಫೋಟ: ಕಾರು ಮರಕ್ಕೆ ಢಿಕ್ಕಿ
Update: 2016-07-20 23:52 IST
ಮಂಗಳೂರು, ಜು.20: ಚಕ್ರ ಸ್ಫೋಟಗೊಂಡು ಚಾಲಕನ ನಿಯಂತ್ರಣಕಳೆದುಕೊಂಡ ಕಾರೊಂದು ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲಿದ್ದ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗ್ಗೆ ಯೆಯ್ಯೆಡಿ ಬಳಿ ನಡೆದಿದೆ.
ಮಹಿಳೆಯರ ಸಹಿತ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದ್ದು, ವಿದೇಶದಿಂದ ಆಗಮಿಸುತ್ತಿದ್ದ ಕುಟುಂಬದ ಓರ್ವ ಸದಸ್ಯನನ್ನು ಕರೆದುಕೊಂಡು ಬರಲು ಸ್ವಿಫ್ಟ್ ಕಾರಿನಲ್ಲಿ ಉಳ್ಳಾಲದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಯೆಯ್ಯಿಡಿ ತಲುಪುತ್ತಿದ್ದಂತೆ ಅದರ ಚಕ್ರ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಬಹುಭಾಗ ಜಖಂಗೊಂಡಿದ್ದು, ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಬಗ್ಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.