ಪೆರ್ಡೂರು: ರೋಟರಿ ಕ್ಲಬ್‌ನಿಂದ ರೈತಮಿತ್ರ ವಿಶೇಷ ಕಾರ್ಯಕ್ರಮ
ಹೆಬ್ರಿ, ಜು.20: ಪೆರ್ಡೂರು ಗ್ರಾಮದ ಅಜ್ಜರಕಟ್ಟೆಯ ಬಳಿಯ ಗದ್ದೆಯಲ್ಲಿ ಗಣ್ಯರ ದಂಡು. ಪರಿಸರದ ಮಂದಿಗೆ ಅಪರೂಪದ ಅತಿಥಿಗಳು. ಕೆಲ ಕ್ಷಣದಲ್ಲೇ ಬಂದವರ ವಸ್ತ್ರ ಬದಲು, ಕ್ಷಣಾರ್ಧದಲ್ಲಿ ಅವರೆಲ್ಲರೂ ಕೆಸರು ಗದ್ದೆಗಿಳಿದರು. ನೇಜಿಯ ಸೂಡಿಯನ್ನೆತ್ತಿ ನಾಟಿ ನೆಡಲು ಆರಂಭಿಸಿದರು. ಪೆರ್ಡೂರು ಅಂಬುಜಾಕ್ಷ ಅವರ ಮನೆಮಂದಿ ಮತ್ತು ಕೃಷಿ ಕೂಲಿ ಕಾರ್ಮಿಕರು ಅವರಿಗೆ ಸಾಥ್ ನೀಡಿದರು. ಈ ದೃಶ್ಯ ಕಂಡು ಬಂದಿದ್ದು ಕಳೆದ ಸೋಮವಾರ ಪೆರ್ಡೂರು ಅಜ್ಜರಕಟ್ಟೆ ಅಂಬುಜಾಕ್ಷರ ಹಡಿಲು ಗದ್ದೆಯಲ್ಲಿ. ಪೆರ್ಡೂರು ರೋಟರಿ ಕ್ಲಬ್ ವತಿಯಿಂದ ಕ್ಲಬ್‌ನ ಸದಸ್ಯ ನಿವೃತ್ತ ಪ್ರಾಂಶುಪಾಲ ಮಂಜುನಾಥ್ ಶೇರಿಗಾರ್ ನೇತೃತ್ವದಲ್ಲಿ ರೈತ ಮಿತ್ರ ವಿಶೇಷ ಕಾರ್ಯಕ್ರಮದಡಿ ಹಡಿಲು ಬಿಟ್ಟ ಎರಡು ಎಕರೆ ಗದ್ದೆಯ ನಾಟಿ ಕಾರ್ಯವನ್ನು ರೋಟರಿ ಸದಸ್ಯರು ಕೃಷಿ ಕೂಲಿ ಕಾರ್ಮಿಕರ ಜೊತೆಗೂಡಿ ನಡೆಸಿಕೊಟ್ಟರು.
ರೋಟರಿ ಸಹಾಯಕ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್., ರೋಟರಿ ವಲಯ ಪ್ರತಿನಿಧಿ ಡಾ.ಪೆರ್ಡೂರು ಜಿ.ಎಸ್.ಕೆ.ಭಟ್, ಕ್ಲಬ್‌ನ ಸದಸ್ಯ ನಿವೃತ್ತ ಪ್ರಾಂಶುಪಾಲ ಮಂಜುನಾಥ್ ಶೇರಿಗಾರ್, ಪೆರ್ಡೂರು ರೋಟರಿ ಅಧ್ಯಕ್ಷ ಚಂದ್ರ ನಾಯ್ಕಾ ಎಚ್., ಕಾರ್ಯದರ್ಶಿ ರಾಜ್‌ಕುಮಾರ್ ಶೆಟ್ಟಿ, ಪೆರ್ಡೂರು ರೋಟರಿ ಕ್ಲಬ್ ಪ್ರಮುಖರಾದ ಕೆ. ಶಾಂತಾರಾಮ ಸೂಡ, ಪ್ರಮೋದ್ ರೈ, ನಿಯೋಜಿತ ಅಧ್ಯಕ್ಷ ಖಜಾನೆ ಬಾಲಕೃಷ್ಣ ಹೆಗ್ಡೆ, ಕಾರ್ಯದರ್ಶಿ ಕರುಣಾಕರ ಆಚಾರ್ಯ, ಉಪೇಂದ್ರ ಆಚಾರ್ಯ, ಸೀತಾರಾಮ ಉಡುಪ ಮುಂತಾದವರು ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.