ಬಿಜೈ: ಅನಾಥ ಸ್ಥಿತಿಯಲ್ಲಿ ಮಗು ಪತ್ತೆ
Update: 2016-07-21 13:14 IST
ಮಂಗಳೂರು ,ಜು.21: ನಗರದ ಬಿಜೈನಲ್ಲಿ ಎರಡು ವರ್ಷದ ಮಗುವೊಂದು ಅನಾಥ ಸ್ಥಿತಿಯಲ್ಲಿ ಇಂದು ಮುಂಜಾನೆ ಪತ್ತೆಯಾಗಿದೆ.
ಮಗುವನ್ನು ಸೀರೆಯಲ್ಲಿ ಮಲಗಿಸಿ ಬಿಜೈ ಚರ್ಚ್ ಬಳಿಯಿರುವ ಕಟ್ಟಡವೊಂದರ ವರಾಂಡದಲ್ಲಿ ಮಲಗಿಸಲಾಗಿತ್ತು. ಬೆಳಿಗ್ಗೆ ಕಟ್ಟಡದಲ್ಲಿನ ಕಚೇರಿ ಬಾಗಿಲು ತೆರೆಯುವ ವೇಳೆ ಕಟ್ಟಡದಲ್ಲಿರುವವರಿಗೆ ಗಮನಕ್ಕೆ ಬಂದಿದೆ. ಕೂಡಲೇ ವೈಟ್ ಡೌಸ್ ಎನ್ನುವ ಎನ್ ಜಿ ಒ ಸಂಸ್ಥೆಗೆ ವಿಷಯ ತಿಳಿಸಲಾಯಿತು. ವೈಟ್ ಡೌಸ್ ಸಂಸ್ಥೆಯವರು ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.