×
Ad

ಹೈದರಾಬಾದ್: ನಾಯಿಮರಿಗಳನ್ನು ಬೆಂಕಿಗೆಎಸೆದು ಕೊಂದ ಬಾಲಕರ ಬಂಧನ

Update: 2016-07-21 14:18 IST

ಹೈದರಾಬಾದ್,ಜುಲೈ 21: ನಾಯಿಮರಿಗಳನ್ನು ಬೆಂಕಿಗೆಸೆದು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಬಾಲಕರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಪ್ರಾಣಿಸಂರಕ್ಷಣಾ ಕಾರ್ಯಕರ್ತರು ನೀಡಿದ ದೂರಿನನ್ವಯ ಪೊಲೀಸರು ಕ್ರಮಕೈಗೊಂಡಿದ್ದು ಹದಿನೆಂಟುವರ್ಷ ಕೆಳ ವಯೋಮಾನದ ಬಾಲಕರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

 ಮುರ್ಶಿದಾಬಾದ್‌ನಲ್ಲಿ ಮರದ ಗೆಲ್ಲುಗಳನ್ನು ಒಟ್ಟು ಸೇರಿಸಿ ಬೆಂಕಿ ಹಚ್ಚಿದ ಬಳಿಕ ನಾಯಿ ಮರಿಗಳನ್ನು ಅದಕ್ಕೆಸೆದು ಕೊಂದು ಹಾಕಿದ್ದು ವೀಡಿಯೊವನ್ನು ಚಿತ್ರೀಕರಿಸಿ ಈ ಬಾಲಕರು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದರೆನ್ನಲಾಗಿದೆ.

ಹೂಮನ್ ಸೊಸೈಟಿ ಇಂಟರ್‌ನ್ಯಾಶನಲ್, ಪೀಪಲ್ಸ್ ಫಾರ್ ಅನಿಮಲ್ಸ್ ಮುಂತಾದ ಸಂಘಟನೆಗಳು ಹೈದರಾಬಾದ್ ಪೊಲೀಸ್ ಕಮಿಶನರ್‌ರಿಗೆ ವೀಡಿಯೊ ದೃಶ್ಯಗಳನ್ನು ಹಸ್ತಾಂತರಿಸಿ ದೂರು ನೀಡಿದ್ದವು. ನಂತರ ಬಾಲಕರನ್ನು ಪೊಲೀಸರು ಬಂಧಿಸಿದ್ದು ಜುವೈನಲ್ ಕಾನೂನಿನಂತೆ ಇವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News