×
Ad

ಎಚ್ಚರ! ಸಿಬಿಐ ಶೀಘ್ರ ನಿಮ್ಮ ಬಳಿ ಬರಲಿದೆ: ಸಿಸೋಡಿಯರಿಗೆ ಕೇಜ್ರಿವಾಲ್‌ರಿಂದ ವ್ಯಂಗ್ಯ ಮಿಶ್ರಿತ ಸಲಹೆ

Update: 2016-07-21 14:24 IST

ಹೊಸದಿಲ್ಲಿ,ಜುಲೈ 21: ಸಿಬಿಐ ತನಿಖೆ ಎದುರಿಸಲು ಸಿದ್ಧವಾಗಿ ಇರಿ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯರಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ವ್ಯಂಗ ಮಿಶ್ರಿತ ಸಲಹೆ ನೀಡಿದ್ದಾರೆಂದು ವರದಿಯಾಗಿದೆ. ದ್ವಾರಕೆಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಕಾಲೇಜ್‌ನ ಹೊಸ ಕಟ್ಟಡವನ್ನು ಸಿಸೋಡಿಯ ಉದ್ಘಾಟಿಸಿದ ಬೆನ್ನಿಗೆ ಕೇಜ್ರಿವಾಲ್ ಈ ಎಚ್ಚರಿಕೆಮಿಶ್ರತ ಸಲಹೆ ನೀಡಿದ್ದು ಮೋದಿ ಕೂಡಲೇ ಸಿಬಿಐಯನ್ನು ಕಳುಹಿಸಿ ಕಟ್ಟಡ ನಿರ್ಮಿಸುವ ಅಧಿಕಾರ ತಮಗಿಲ್ಲ ಎಂದು ಘೋಷಿಸಲಿದ್ದಾರೆ ಎಂದು ಕೇಜ್ರಿವಾಲ್ ಟ್ವಿಟರ್ ಮೂಲಕ ಗೇಲಿ ಮಾಡಿದ್ದಾರೆ.

ಪಿಡಬ್ಲ್ಯೂಡಿ ಸಚಿವ ಸತ್ಯೇಂದ್ರ ಜೈನ್‌ರಜೊತೆಗೂಡಿ ಶಿಕ್ಷಣ ಸಚಿವ ಕೂಡಾ ಆಗಿರುವ ಸಿಸೋಡಿಯ ಕಾಲೇಜಿನ ಹೊಸ ಕಟ್ಟಡವನ್ನು ಉದ್ಘಾಟಿಸಿದ್ದು ಇದನ್ನು ಉಲ್ಲೇಖಿಸಿ ಕೇಜ್ರಿವಾಲ್ ತಮಾಷೆ ಭರಿತ ಟ್ವೀಟ್ ಮಾಡಿದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News