×
Ad

ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಪತ್ತೆ; ಆರೋಪಿಗಳು ಪರಾರಿ

Update: 2016-07-21 17:51 IST

ಬೆಳ್ತಂಗಡಿ, ಜು.21: ಗೇರು ಕಟ್ಟೆ ಸಮೀಪ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಬುಧವಾರ ರಾತ್ರಿಯ ವೇಳೆ ಬೆಳ್ತಂಗಡಿ ವೃತ್ತನಿರೀಕ್ಷಕ ನೇಮಿರಾಜ್ ಮತ್ತು ತಂಡ ವಾಹನ ತಪಾಸಣೆ ನಡೆಸುತ್ತಿದ್ದಾಗ ಪಿಕಪ್ ವಾಹನವೊಂದು ನಿಲ್ಲಿಸಲು ಸೂಚನೆ ನೀಡಿದರೂ, ನಿಲ್ಲಿಸದೆ ಹೋಗುತ್ತಿರುವುದನ್ನು ಗಮನಿಸಿ ಬೆನ್ನಟ್ಟಿದಾಗ ವಾಹನವನ್ನು ಬದಿಯಲ್ಲಿ ಬಿಟ್ಟು ಚಾಲಕ ಹಾಗೂ ವಾಹನದಲ್ಲಿದ್ದವರು ಪರಾರಿಯಾಗಿದ್ದಾರೆ.

ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಅಕ್ರಮವಾಗಿ ದನಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದು ಪತ್ತೆಯಾಗಿದೆ. ಮೂರು ದನಗಳನ್ನು ಕೈಕಾಲುಗಳನ್ನು ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದ್ದು ಅಕ್ರಮವಾಗಿ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಪ್ರಕರಣ ಇದಾಗಿದ್ದು, ಪಿಕಪ್ ಹಾಗೂ ದನಗಳನ್ನು ವಶಪಡಿಸಿಕೊಂಡು ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News