ಕೋಟೆಕಾರ್: ನೂರಾನಿ ಯತೀಂಖಾನ ಮತ್ತು ದಾರುಲ್ ಮಸಾಕೀನ್‌ನಿಂದ ಹಜ್ ತರಬೇತಿ
Update: 2016-07-21 18:14 IST
ಮಂಗಳೂರು, ಜು.21: ಕುಂಪಲ ಕೋಟೆಕಾರ್ ನ ನೂರಾನಿ ಯತೀಂಖಾನ ಮತ್ತು ದಾರುಲ್ ಮಸಾಕೀನ್ ನಿಂದ ಹಜ್ ಯಾತ್ರಾರ್ಥಿಗಳಿಗೆ ತರಬೇತಿಯನ್ನು ಜು.31 ರಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.
ಯತೀಂ ಖಾನ ವಠಾರದಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮದಲ್ಲಿ ಹಾಜಿ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ದುಆ ನೆರವೇರಿಸಲಿದ್ದಾರೆ. ಹಾಜಿ ಉಸ್ಮಾನ್ ಮದನಿ ತರಬೇತಿ ನೀಡಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹಜ್ ಯಾತ್ರಾರ್ಥಿಗಳು ಮತ್ತು ಹಿತೈಷಿಗಳು ಭಾಗವಹಿಸುವಂತೆ ಕೋಟೆಕಾರ್ ಕುಂಪಲದ ನೂರಾನಿ ಯತೀಂಖಾನ ಮತ್ತು ದಾರುಲ್ ಮಸಾಕೀನ್‌ನ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.