×
Ad

ಭಟ್ಕಳ: ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ

Update: 2016-07-21 20:26 IST

ಭಟ್ಕಳ: ತಾಲೂಕಾಡಳಿತವು ಪ್ಲಾಸ್ಟಿಕ್ ನಿಷೇಧಕ್ರಮವನ್ನು ಹಂತಹಂತವಾಗಿ ಜಾರಿಗೊಳಿಸಬೇಕೆಂದು ಗುರುವಾರಇಲ್ಲಿನ ಸಹಾಯಕಆಯುಕ್ತರಅಧ್ಯಕ್ಷತೆಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಗೊಳಿಸಲು ಸಾರ್ವಜನಿಕರಿಂದಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ವ್ಯಕ್ತವಾಯಿತು. ಸಭೆಯಲ್ಲಿ ಮಾತನಾಡಿದ ಸಹಾಯಕಕಮಿಷನರ್‌ಚಿದಾನಂದ ವಠಾರೆ ಪ್ಲಾಸ್ಟಿಕ್ ನಿಷೇಧಿಸುವುದು ಪ್ರತಿಯೋರ್ವ ನಾಗರೀಕರಕರ್ತವ್ಯವಾಗಿದ್ದುಇದಕ್ಕೆ ವ್ಯಾಪಾರಸ್ಥರು ಸಹ ಸಹಕರಿಸಬೇಕು.ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರಿಂದ ನಮ್ಮ ಪರಿಸರದರಕ್ಷಣೆಗೆ ನಾವು ಮುಂದಾದಂತಾಗುವುದು.ಪ್ರತಿಯೊಂದುಗ್ರಾಮ ಸಭೆಗಳಲ್ಲಿಯೂ ಕೂಡಾ ಪ್ಲಾಸ್ಟಿಕ್ ನಿಷೇಧದಕುರಿತುಜನರಲ್ಲಿಜಾಗೃತಿ ಮೂಡಿಸುವ ಕೆಲಸವನ್ನುಗ್ರಾಮ ಪಂಚಾಂತ್‌ಗಳ ಮಾಡಬೇಕುಎಂದರು.ಸ್ವಚ್ಚಭಾರತ್‌ಅಭಿಯಾನಕ್ಕೆ ಪೂರಕವಾಗಿ ಪ್ಲಾಸ್ಟಿಕ್ ನಿಷೇಧದಕುರಿತು ಮಾಹಿತಿ ನೀಡಿದಲ್ಲಿ ಗ್ರಾಮಗಳಲ್ಲಿ ಮೊದಲು ನಾವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬಹುದುಎಂದೂ ಹೇಳಿದರು.

ಅಗಸ್ಟ್ 15ರಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು.ಯಾವುದೇರೀತಿಯಿಂದ ಪ್ಲಾಸ್ಟಿಕ್ ಬಳಸಿದರೂ ಕೂಡಾಕಠಿಣಕ್ರಮ, ಕೇಸು, ದಂಡ ವಿಧಸಲಾಗುವುದುಎಂದು ತಿಳಿಸಿದ ಅವರು ಈ ಕುರಿತು ವ್ಯಾಪಕ ಪ್ರಚಾರ ನೀಡಲಾಗುವುದುಎಂದೂ ತಿಳಿಸಿದರು.

ವ್ಯಾಪಾರಸ್ಥರ ಸಂಘದ ವತಿಯಿಂದ ಮಾತನಾಡಿದಅಧ್ಯಕ್ಷ ವೆಂಕಟೇಶ ಪ್ರಭು ಕಳೆದ ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಯನ್ನು ಮಾಡಿಕೊಂಡು ಬರುತ್ತಿರುವವರನ್ನು ಎಕಾ ಎಕಿ ತಡೆಯಲುಅಸಾಧ್ಯವಾಗಿದೆ.ಇದರಿಂದಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆತೀವ್ರತೊಂದರೆಯಾಗುತ್ತದೆ.ಒಮ್ಮೆಲೇಇದನ್ನುತೆಗೆಯುವಕ್ಕಿಂತ ಪ್ಲಾಸ್ಟಿಕ್ ತಯಾರಿಸುವುದನ್ನೇ ಮೊದಲು ಬಂದ್ ಮಾಡಬೇಕು.ಪ್ಲಾಸ್ಟಿಕ್ ನಿಷೇಧಿಸಲು ವ್ಯಾಪಾರಸ್ಥರ ಸಂಘವು ಸಂಪೂರ್ಣ ಸಹಕಾರ ನೀಡಲು ಸಿದ್ಧವಿದ್ದು ತಾತ್ಕಾಲಿಕವಾಗಿಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ವಿನಾಯಿತಿ ನೀಡುವಂತೆಕೋರಿದರು. ಹಾಗೂ ಯಾವುದೇರೀತಿಯಿಂದ ಸಗಟು ವ್ಯಾಪಾರಕಂಡು ಬಂದರೆ ನಿರ್ದಾಕ್ಷಿಣ್ಯವಾಗಿಕ್ರಮ ಕೈಗೊಳ್ಳಲೂ ಸೂಚಿಸಿದರು. ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿಎನ್. ಜಿ. ರಮೇಶ್, ಪರಸರಅಧಿಕಾರಿ ವೆಂಕಟೇಶ ನಾವುಡಾ, ಹಿರಿಯಆರೋಗ್ಯಾಧಿಕಾರಿಸುಜಯಾ ಸೋಮನ್, ತಂಜೀಮ್ ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್‌ಅಲ್ತಾಫ್‌ಖರೂರಿ, ಹಿರಿಯಉಪಾಧ್ಯಕ್ಷಇನಾಯತುಲ್ಲಾ ಶಾಬಂದ್ರಿ, ವ್ಯಾಪಾರಸ್ಥರ ಸಂಘದ ಸಿದ್ಧಿಕ್ ಇಸ್ಮಾಯಿಲ್, ಎಂ. ಎಸ್. ಮೊಹತೆಶಂ, ಉಧ್ಯಮಿರಾಜೇಶ ನಾಯಕ, ಮಂಜುನಾಥ ಪ್ರಭು, ವೀರೇಂದ್ರ ಶ್ಯಾನುಭಾಗ, ಪುರಸಭಾ ಸದಸ್ಯರು,  ಗ್ರಾಮ ಪಂಚಾಯತ್‌ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News