ಯೋಗ ತರಬೇತಿ ಶಿಬಿರ ಉದ್ಘಾಟನೆ
Update: 2016-07-21 22:45 IST
ಮಂಗಳೂರು,ಜು.21: ನಗರದ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ, ಸಂಸ್ಥೆಯ ಮಹಿಳಾ ಅಭಿವೃದ್ಧಿ ಘಟಕದ ವತಿಯಿಂದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಯೋಗ ತರಬೇತಿ ಶಿಬಿರ ನಡೆಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಸುಶೀಲಾ ಕುಮಾರಿ ವಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕುಲಸಚಿವರಾದ ರಾಜೇಂದ್ರ ಪ್ರಸಾದ್, ಮಹಿಳಾ ಅಭಿವೃದ್ಧಿ ಘಟಕದ ಅಧಿಕಾರಿಗಳಾದ ಮೃದುಲಾ ವಿ. ಮತ್ತು ಮಮತಾ ಎನ್., ಸಂಸ್ಥೆಯ ವಿವಿಧ ವಿಭಾಗಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.