ಮದರಸ ಪಬ್ಲಿಕ್ ಪರೀಕ್ಷೆ: ಸೈಮ ಮತ್ತು ರಾಝಿ ರಾಜ್ಯಕ್ಕೆ ದ್ವಿತೀಯ

Update: 2016-07-21 17:23 GMT

ಕೊಣಾಜೆ, ಜು.21: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಮೋಂಟುಗೋಳಿ ರೇಂಜಿಗೆ ಒಳಪಟ್ಟ ಹಯಾತ್‌ನಗರ ಹಯಾತುಲ್ ಇಸ್ಲಾಂ ಮದರಸದ ರಫೀಕ್ ಮತ್ತು ಶಂಶಾದ್ ದಂಪತಿಯ ಪುತ್ರಿ ಸೈಮ 5ನೆ ತರಗತಿಯಲ್ಲಿ 562 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಮೊಂಟೆಪದವು ಅಲ್ ಬದ್ರಿಯಾ ಮದರಸದ ಉಮ್ಮರ್ ಮತ್ತು ಸಾರ ದಂಪತಿಯ ಪುತ್ರ ಮುಹಮ್ಮದ್ ರಾಝಿ 7 ನೆ ತರಗತಿಯಲ್ಲಿ 558 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News