ಕರಂಬಾರು: ದಲಿತ ಸಂಘರ್ಷ ಸಮಿತಿಯ ಗ್ರಾಮಶಾಖೆ ಉದ್ಘಾಟನೆ
ಬೆಳ್ತಂಗಡಿ, ಜು.21: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಇದರ ಕರಂಬಾರು ಗ್ರಾಮ ಶಾಖೆಯ ರಚನೆಯು ತಾಲೂಕು ಸಂಘಟನಾ ಸಂಚಾಲಕ ಬಾಬು ಎರ್ಮೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ಶಿರ್ಲಾಲು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣು ಸಾಧನ ಸಭಾ ಕಾರ್ಯಕ್ರಮ ಉದ್ಘಾಟಿಸಿ ಸಂಘಟನೆಯ ಉದ್ದೇಶವನ್ನು ವಿವರಿಸಿ ಶುಭಹಾರೈಸಿದರು. ತಾಲೂಕು ಸಂಚಾಲಕ ರಮೇಶ್ ಆರ್. ಸಂಘಟನೆಯ ಹುಟ್ಟು, ಹೋರಾಟ ಹಾಗೂ ದ.ಸಂ.ಸ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪರ ನೇತೃತ್ವದಲ್ಲಿ ಕರ್ನಾಟಕದ ದಲಿತ ಚಳುವಳಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ಈ ಸಂದರ್ಭ ವೇದಿಕೆಯಲ್ಲಿ ತಾಲೂಕು ನಿರ್ವಾಹಕ ಸಮಿತಿ ಸದಸ್ಯ ಸಂಜೀವ ಆರ್, ತಾಲೂಕು ಸಂಘಟನಾ ಸಂಚಾಲಕ ರಮೇಶ್ ಮಡಂತ್ಯಾರು, ತಾಲೂಕು ಖಜಾಂಚಿ ವಿಶ್ವನಾಥ ಕಳೆಂಜ, ಪತ್ರಕರ್ತ ಅಚುಶ್ರೀ ಬಾಂಗೇರು, ಬಹುಜನ ವಿದ್ಯಾರ್ಥಿ ಸಂಘದ ತಾಲೂಕು ಸಂಯೋಜಕ ಲಕ್ಷ್ಮಣ್ ಜಿ.ಎಸ್, ಸುಖೇಶ್ ಎಂ, ಸ್ಥಳೀಯ ಹಿರಿಯ ಮುಖಂಡ ಸಗುಣ ಪುಚ್ಚೆದೊಟ್ಟು, ಅಳದಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್, ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯ ರುಕ್ಮಯ್ಯ ಉಪಸ್ಥಿತರಿದ್ದರು.
ಗ್ರಾಮ ಸಮಿತಿ ರಚನಾ ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮುಖಂಡರುಗಳ ಮಾರ್ಗದರ್ಶನದಂತೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ರಾಮ್ ಕುಮಾರ್, ಸಂಘಟನಾ ಸಂಚಾಲಕರುಗಳಾಗಿ ವೇಣುಗೋಪಾಲ್, ಶ್ರೀನಿವಾಸ್ ಹಾಗೂ ಮಹಿಳಾ ಸಂಘಟನಾ ಸಂಚಾಲಕಿ ಗೀತಾ, ಖಜಾಂಚಿಯಾಗಿ ರಮೇಶ್ ಆಯ್ಕೆಯಾದರು. ನಿರ್ವಾಹಕ ಸದಸ್ಯರುಗಳಾಗಿ ನಾರಾಯಣ ಕುದುರು, ಸಂಜೀವ ಬಂತಡ್ಕ, ವಸಂತ್, ನವೀನ್ ಎರ್ಮೆತ್ತೋಡಿ, ಹರೀಶ್ ಬಂತಡ್ಕ, ಕಮಲ ಬಂತಡ್ಕ, ಗಿರಿಜಾ, ಅಪ್ಪಿ, ಅನುಪ್, ರುಕ್ಮಯ್ಯ, ಸದಾಶಿವರನ್ನು ಆಯ್ಕೆ ಮಾಡಲಾಯಿತು.