ಮರಳು ಬಹಿರಂಗ ಹರಾಜು

Update: 2016-07-21 18:26 GMT

ಉಡುಪಿ, ಜು.21: ತಾಲೂಕಿನ ಬ್ರಹ್ಮಾವರ ಹೋಬಳಿಯ ಕರ್ಜೆ ಗ್ರಾಪಂ ವ್ಯಾಪ್ತಿಯ ಹಲುವಳ್ಳಿ ಗ್ರಾಮದ ಸ.ನಂ 25ರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾದ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಲೋಕೋಪಯೋಗಿ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಈ ಮರಳನ್ನು ಜು.25ರಂದು ಮರು ಹರಾಜು ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸುವವರು ಮುಂಗಡವಾಗಿ 10,000ರೂ.ಯನ್ನು ಭದ್ರತಾ ಠೇವಣಿಯಾಗಿ ಡಿಡಿ ಮೂಲಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸರಿನಲ್ಲಿ ಪಾವತಿಸಬೇಕು. ಹರಾಜಿನಲ್ಲಿ ಗೆದ್ದ ಉಮೇದುವಾರ ಹರಾಜಿನ ಮೊಬಲಗಿಗೆ ಶೇ.15 ಮಾರಾಟ ಕರತೆರಿಗೆಯನ್ನು ಪಾವತಿ ಮಾಡಿ ರಶೀದಿಯನ್ನು ಪಡೆದುಕೊಳ್ಳಬೇಕು. ಉಳಿದವರ ಹಣವನ್ನು ಕೂಡಲೇ ಹಿಂದಿರುಗಿಸಲಾಗುವುದು ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News