ಸಿಎ ಫಾತಿಮಾಗೆ ಡಾಕ್ಟರೇಟ್ ಗುರಿ

Update: 2016-07-22 05:59 GMT

ಮಂಗಳೂರು, ಜು.22: " ಪ್ರಥಮ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುವುದು ಸಂತಸ ತಂದಿದೆ. ಮುಂದಕ್ಕೆ ಎಕನಾಮಿಕ್ಸ್ ನಲ್ಲಿ ಪರೀಕ್ಷೆ ಬರೆದು ನಂತರ ಡಾಕ್ಟರೇಟ್ ಮಾಡಬೇಕೆಂದಿದ್ದೇನೆ." ಇದು 2016ರ ಮೇ ತಿಂಗಳಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾದ ಫಾತಿಮಾ ಹಂಝಾರ ಕನಸು.

ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯು 2016ರ ಮೇ ತಿಂಗಳಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಹೆಜಮಾಡಿಯ ಫಾತಿಮಾ ಹಂಝಾ 800ರಲ್ಲಿ 427 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಫಾತಿಮಾ ಹಂಝಾ ಹುಟ್ಟಿದ್ದು ಅಬುಧಾಬಿಯಲ್ಲಿ. ಪ್ರಾಥಮಿಕ ಹಾಗೂ 8ನೆ ತರಗತಿವರೆಗಿನ ಶಿಕ್ಷಣವನ್ನು ಪಡೆದಿದ್ದು ಕೂಡಾ ಅಲ್ಲೇ. ಬಳಿಕ ಪ್ರೌಢ ಹಾಗೂ ಪದವಿ ವಿದ್ಯಾಭ್ಯಾಸವನ್ನು ಬೆಂಗಳೂರಿನ ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಪಡೆದರು. ಬಳಿಕ ಸಿಎ ಪರೀಕ್ಷೆ ಬರೆಯುವ ಉದ್ದೇಶದಿಂದ ಬೆಂಗಳೂರಿನ ಬ್ರಾಗಂಝಾ ಸಂಸ್ಥೆ ಹಾಗೂ ನಾಯ್ಡು ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ಬರೆದು, ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.

ಇವರು ಅಬುಧಾಬಿಯ ಸಂಸ್ಥೆಯೊಂದರಲ್ಲಿ ಹಣಕಾಸು ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಹಂಝಾ ಮತ್ತು ಝೈನಬಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News