×
Ad

ಕಾಸರಗೋಡು: 'ಕಯ್ಯಾರ ಸಾಹಿತ್ಯ ಚಿಂತನ' ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Update: 2016-07-22 12:11 IST

ಕಾಸರಗೋಡು, ಜು.22: ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಾಸರಗೋಡು ಕನ್ನಡ ಬಳಗದ ಸಂಯುಕ್ತಾಶ್ರಯದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಹಯೋಗದಲ್ಲಿ ನಡೆಯುವ 'ಕಯ್ಯಾರ ಸಾಹಿತ್ಯ ಚಿಂತನ' ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಶುಕ್ರವಾರ ಆರಂಭಗೊಂಡಿತು.

ಮಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ. ಕೃಷ್ಣ ಭಟ್ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.

ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಪ್ರಾಂಶುಪಾಲ ಡಾ.ಸಿ.ಬಾಬುರಾಜ್, ಕಸಾಪ ಅಧ್ಯಕ್ಷ ಎಸ್.ವಿ ಭಟ್, ಆಯಿಷಾ ಪೆರ್ಲ, ಉಮೇಶ್ ಸಾಲಿಯಾನ್, ರತ್ನಾಕರ ಮಲ್ಲಮೂಲೆ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ವಿಚಾರ ಗೋಷ್ಠಿಗಳು ಆರಂಭಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News