×
Ad

ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಜಾನಪದ ಸೊಗಡು

Update: 2016-07-22 17:51 IST

ಕುಂದಾಪುರ, ಜು.22: ಕೋಡಿಯ ಬ್ಯಾರೀಸ್ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಜಾನಪದ ಸೊಗಡು ಕಾರ್ಯಕ್ರಮ ನಡೆಯಿತು.

ಉಡುಪಿ ಜಿಲ್ಲಾ ಜನಪದ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಬೀಸುವ ಕಲ್ಲಿನ ಪದ, ಭತ್ತಕುಟ್ಟುವ ಹಾಡು, ಹೆಣ್ಣನ್ನು ಮದುವೆ ಮಾಡಿ ಗಂಡಿನ ಕಡೆಯವರಿಗೆ ಕೈ ಒಪ್ಪಿಸಿಕೊಡುವ ಹಾಡುಗಳನ್ನು ಹಾಡಿ, ಸಂಸ್ಕೃತಿ, ಪರಂಪರೆಯ ಲೋಕವನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ವಹಿಸಿದ್ದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಮೀರ್ ಉಪಸ್ಥಿತರಿದ್ದರು.

ಸಮಾಜಶಾಸ್ತ್ರ ಉಪನ್ಯಾಸಕಿ ಸುಜಾತ ಶೆಟ್ಟಿ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪದವಿ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಮಾಲತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News