×
Ad

ಮಗನಿಗೆ ‘ಕಂಡಲ್ಲಿ ಗುಂಡಿಕ್ಕಬೇಕು’: ಹತ ಪಾಕ್ ರೂಪದರ್ಶಿಯ ತಂದೆ

Update: 2016-07-22 20:30 IST

ಇಸ್ಲಾಮಾಬಾದ್, ಜು. 22: ತನ್ನ ಮಗಳು ಹಾಗೂ ರೂಪದರ್ಶಿ ಖಾಂದೀಲ್ ಬಲೋಚ್‌ರನ್ನು ಹತ್ಯೆಗೈದ ತನ್ನ ಮಗನಿಗೆ ‘‘ಕಂಡಲ್ಲಿ ಗುಂಡಿಕ್ಕಬೇಕು’’ ಎಂದು ತಂದೆ ಅನ್ವರ್ ಅಝೀಮ್ ಹೇಳಿದ್ದಾರೆ.
‘‘ಅವನಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ನಾನು ಹೇಳುತ್ತೇನೆ. ಅವನು ನನ್ನ ಮಗಳನ್ನು ಉಸಿರುಗಟ್ಟಿಸಿದ್ದಾನೆ’’ ಎಂದಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ದಿಟ್ಟತನದ ಪೋಸ್ಟ್‌ಗಳನ್ನು ಹಾಕಿರುವುದಕ್ಕಾಗಿ ಬಲೋಚ್‌ರನ್ನು ಸ್ವತಃ ಆಕೆಯ ತಮ್ಮನೇ ಉಸಿರುಗಟ್ಟಿಸಿ ಕೊಂದಿರುವುದನ್ನು ಸ್ಮರಿಸಬಹುದಾಗಿದೆ.
‘‘ನಮಗೆ ಮತ್ತು ಬರಿಸುವ ಪದಾರ್ಥಗಳನ್ನು ನೀಡಲಾಗಿತ್ತು. ನಾವು ಮಹಡಿಯಲ್ಲಿ ಮಲಗಿದ್ದೆವು. ಅವಳು ನಮ್ಮನ್ನು ಕರೆದಿರಬೇಕು’’ ಎಂದು ಅಝೀಮ್ ನೋವು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News