×
Ad

ಆಸರೆ ವಿಮೆನ್ಸ್ ಫೌಂಡೇಶನ್‌ನ ಅಧ್ಯಕ್ಷೆಯಾಗಿ ಸಲ್ಮಾ ಉಮರ್ ಆಯ್ಕೆ

Update: 2016-07-22 21:17 IST

ಮಂಗಳೂರು, ಜುಲೈ 22: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಂಗಸಂಸ್ಥೆಯಾದ ಆಸರೆ ವಿಮೆನ್ಸ್ ಫೌಂಡೇಶನ್‌ನ ನೂತನ ಅಧ್ಯಕ್ಷೆಯಾಗಿ ಸಲ್ಮಾ ಉಮರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಶಬೀನಾ ಅಖ್ತರ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಸಲಹೆಗಾರರಾಗಿಖೈರುನ್ನಿಸಾ ಸೈಯದ್ ಮತ್ತು ಝಾಹಿದಾ ಜಲೀಲ್, ಉಪಾಧ್ಯಕ್ಷೆಯಾಗಿ ಆತಿಕಾ ರಫೀಕ್, ಕಾರ್ಯದರ್ಶಿಯಾಗಿ ಮುಮ್ತಾಝ್ ಪಕ್ಕಲಡ್ಕ, ಕೋಶಾಧಿಕಾರಿಯಾಗಿ ಮುಮ್ತಾಝ್ ಹಕೀಮ್, ಸದಸ್ಯರಾಗಿ ಹಸೀನಾ ಪರ್ವೇಝ್, ಆಬಿದಾ ಬಾನು, ರುಖ್ಯಾ ಅಲಿ, ಸೆಲಿಕಾ, ನಫೀಸಾ ಖಾಲಿದ್, ಆಸಿಯ ಮುಹಮ್ಮದ್, ಡಾ. ಫಾತಿಮಾ ಶಫೀಲಾ, ಝೊಹರಾ ಉಳ್ಳಾಲ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News