ಮೂರುಗೋಳಿ ಮದ್ರಸ ಪ್ರಾರಂಭೊತ್ಸವ

Update: 2016-07-22 16:06 GMT

ಉಪ್ಪಿನಂಗಡಿ, ಜು.22: ಮಿಪ್ರಾಹುಲ್ ಉಲೂಂ ಮದ್ರಸ ಮೂರುಗೋಳಿ ಇದರ ಪ್ರಾರಂಭೋತ್ಸವವು ಇತ್ತೀಚೆಗೆ ನಡೆಯಿತು.

ಎಚ್‌ಬಿಜೆಎಂ ಮಸೀದಿ ಉಪಾಧ್ಯಕ್ಷರಾದ ಇ.ಎಂ. ಇಬ್ರಾಹೀಂ ಮಡಂತಿಲ ಅಧ್ಯಕ್ಷತೆ ವಹಿಸಿದರು. ಮಿಪ್ರಾಹುಲ್ ಉಲೂಂ ಮದ್ರಸ ಮೂರುಗೋಳಿ ಅಧ್ಯಾಪಕ ಸಲಾಂ ಸಅದಿ ಉದ್ಘಾಟಿಸಿದರು. ಎಚ್‌ಬಿಜೆಎಂ ಮಸೀದಿ ಖತೀಬ್ ಅಲ್ ಹಾಜಿ ಎಸ್.ಎಸ್. ಬಶೀರ್ ಝೂಹ್ರಿ ಮುಖ್ಯ ಪ್ರಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಂಯುಎಮ್‌ಡಿಸಿ ಅಧ್ಯಕ್ಷ ಇ.ಎಂ.ಉಮರ್ ಹಾಜಿ, ಉಪಾಧ್ಯಕ್ಷ ಇಸ್ಮಾಯೀಲ್ ಕಜೆಮಾರ್, ಎಸ್ಸೆಸ್ಸೆಫ್ ಗಲ್ಫ್ ಸಮಿತಿ ಸದಸ್ಯ ಹಾಜಿ ದಾವೂದ್, ಕೋಶಾಧಿಕಾರಿ ಅಬ್ದುಲ್ ಬಶೀರ್ ಮಡಂತಿಲ, ಎಚ್‌ಬಿಜೆಎಂ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಿ.ಪಿ., ಕೋಶಾಧಿಕಾರಿ ಮುಹಮ್ಮದ್ ಬಾವ ಬಿ.ಎಂ., ಎಸ್ಸೆಸ್ಸೆಫ್ ನಾಯಕರಾದ ನಾಸಿರ್ ಮೂರುಗೋಳಿ, ಜಾಫರ್ ಬಾರ್ಯ, ಕ್ಯಾಂಪಸ್ ಕಾರ್ಯದರ್ಶಿ ಕಲಂದರ್ ಶಾಫಿ ಮೂರುಗೋಳಿ ಎಸ್ಸೆಸ್ಸೆಫ್ ಶಾಖಾ ಉಸ್ತುವಾರಿ ಜುನೈದ್ ತುರ್ಕಳಿಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸ್ವಾಗತಿಸಿ ಎಸ್‌ಬಿಎಸ್. ಅಧ್ಯಕ್ಷ ಮುಹಮ್ಮದ್ ಮುಬಾರಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News