ಮೂಡುಬಿದಿರೆ: ಗಿಡ ನೆಟ್ಟು ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿದ ಪುಟಾಣಿ ತಬ್ರೇಝ್

Update: 2016-07-22 16:18 GMT

ಮೂಡುಬಿದಿರೆ, ಜು.22: ಪೇಟೆಯ ಲಿಟ್ಲ್ ಫ್ಲವರ್ ನರ್ಸರಿ ಸ್ಕೂಲ್‌ನ ವಿದ್ಯಾರ್ಥಿ ತಬ್ರೇಝ್ ತಮ್ಮ ಹುಟ್ಟುಹಬ್ಬವನ್ನು ಕೋಟೆಬಾಗಿಲಿನಲ್ಲಿರುವ ಅವರ ಮನೆಯಲ್ಲಿ ಗಿಡ ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ನಮ್ಮ ಮನೆ ನಮ್ಮ ಮರ ಎಂಬ ಯೋಜನೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥ ಗುರುಪ್ರಸಾದ್, ನಿರ್ದೇಶಕಿ ಲಕ್ಷ್ಮೀ ಗುರುಪ್ರಸಾದ್, ಸುರೇಶ್ ಅಮೀನ್ ಉಪಸ್ಥಿತರಿದ್ದರು.

ಗುರುಪ್ರಸಾದ್ ತಮ್ಮ ಶಾಲೆಯ ಎಲ್ಲ ಮಕ್ಕಳ ಹುಟ್ಟುಹಬ್ಬವನ್ನು ಅವರ ಮನೆಗೆ ತೆರಳಿ ಗಿಡನೆಡುವ ಮೂಲಕ ವಿಶಿಷ್ಟವಾಗಿ ಆಚರಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News