ಮಂಗಳೂರು ವಿವಿಯಲ್ಲಿ ಕೊಂಕಣಿಯಲ್ಲಿ ಎಂ.ಎ. ಪದವಿ ಪ್ರಾರಂಭ

Update: 2016-07-22 16:24 GMT

ಮಂಗಳೂರು, ಜು. 22: ಎಂ.ಎ. (ಕೊಂಕಣಿ) ಸಾತ್ನಕೋತ್ತರ ಪದವಿಯು ಈವರೆಗೆ ದೇಶದ ಗೋವಾ ವಿಶ್ವವಿದ್ಯಾಲಯದಲ್ಲಿ ಮಾತ್ರ ಲಭ್ಯವಿದ್ದು, ಎರಡನೆ ವಿಶ್ವವಿದ್ಯಾಲಯವಾಗಿ ಮಂಗಳೂರು ವಿಶ್ವವಿದ್ಯಾಲಯವು ಕೊಂಕಣಿ ಎಂ.ಎ.ಯನ್ನು 2016-17ರಿಂದ ಪ್ರಾರಂಭಿಸಿ ದಾಖಲಾರ್ಹ ಸಾಧನೆ ಮಾಡಿದೆ.

ಕೊಂಕಣಿ ಅಕಾಡಮಿ ಹಾಗೂ ಕೊಂಕಣಿ ಅಧ್ಯಯನ ಪೀಠ ಸಹಕಾರದೊಂದಿಗೆ ವಿಶ್ವವಿದ್ಯಾನಿಲಯವು ಸಿಲೆಬಸ್ ಇತ್ಯಾದಿ ಪೂರ್ಣ ಸಿದ್ಧತೆಯೊಡನೆ ಮಂಗಳೂರಿನ ಹಂಪನಕಟ್ಟಾ ಸಂಧ್ಯಾ ಕಾಲೇಜಿನಲ್ಲಿ ಎಂ. ಎ. ಕೊಂಕಣಿ ಆಧ್ಯಯನ ಸೌಲಭ್ಯ ಆಗಸ್ಟ್ 2016ರಿಂದ ಐತಿಹಾಸಿಕವಾಗಿ ಆರಂಭಿಸಲಿದೆ.
ಈ ಎಂ.ಎ. ಪದವಿ ತರಗತಿಗಳು ಸಂಧ್ಯಾ ಕಾಲೇಜಿನಲ್ಲಿ ನಡೆಯಲಿದ್ದು, ಕೊಂಕಣಿ ಅಧ್ಯಯನ ಆಸಕ್ತಿ ಇರುವ ಉದ್ಯೋಗಿಗಳಿಗೆ, ಜನಸಾಮನ್ಯರಿಗೆ ಉತ್ತಮ ಅವಕಾಶ ಇದೆ. ಅಕಾಡಮಿ ಸೇರಿ ಇತರ ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಸೌಲಭ್ಯವೂ ಇರುತ್ತದೆ.

ಆಸಕ್ತರು ಕೂಡಲೇ ಸಂಚಾಲಕರು, ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜು, ಹಂಪನಕಟ್ಟ, ಮಂಗಳೂರು-1 ದೂ.ಸಂ: 0824- 2424608, ಮೊಬೈಲ್ :9449284031 ಇಮೇಲ್ uecm2015@gmail.com ಇಲ್ಲಿಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News