×
Ad

ನರ್ಸ್‌ಗೆ ಲಕ್ಷಾಂತರ ರೂ. ವಂಚನೆ: ದೂರು

Update: 2016-07-22 23:41 IST

ಮಣಿಪಾಲ, ಜು.22: ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ನರ್ಸ್‌ಗೆ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಜಿಬೆಟ್ಟು ಪಡುಸಗ್ರಿಯ ಎಂ.ಎಸ್.ಜಾರ್ಜ್‌ರ ಪತ್ನಿ ಅರ್ಚನಾ ಜಾರ್ಜ್ ಎಂಬವರು ನರ್ಸಿಂಗ್ ಉದ್ಯೋಗ ಮಾಡಿಕೊಂಡಿದ್ದು, ಸುಮಾರು 6 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿದ್ದ ಹಿಲಾರಿಯಸ್ಸ್ ಟೂರ್ಸ್ ಟ್ರಾವೆಲ್ಸ್ ಸಂಸ್ಥೆಯ ಜಾಹಿರಾತಿನಲ್ಲಿ ಫಿನ್‌ಲ್ಯಾಂಡ್ ದೇಶ ದಲ್ಲಿ ನರ್ಸಿಂಗ್ ಉದ್ಯೋಗ ಇರುವುದಾಗಿ ತಿಳಿಸಲಾಗಿತ್ತು.
ಅದರಂತೆ ಅರ್ಚನಾ ತಮ್ಮ ಪಾಸ್‌ಪೋರ್ಟ್ ಹಾಗೂ ಇತರ ದಾಖಲಾತಿಯನ್ನು ಆ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು. ಅಲ್ಲದೆ 2016ರ ಜ.13ರಿಂದ ಜೂ.1ರ ಮಧ್ಯಾವಧಿಯಲ್ಲಿ 3 ಲಕ್ಷ ರೂ. ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದರು. ಬಳಿಕ ಆರೋಪಿಗಳಾದ ರಾಹುಲ್ ಪಟೇಲ್, ಪ್ರನಾಲಿ, ಮಾನ್ವಿಪ್ರರ್ ಸೂ ಎಂಬವರು ಅರ್ಚನಾ ಮಾಡಿದ ಕರೆಗಳನ್ನು ಸ್ವೀಕರಿಸದೆ ವಿದೇಶಕ್ಕೆ ಹೋಗಲು ವೀಸಾ ಪ್ರತಿಯನ್ನು ಕಳುಹಿಸದೆ, ಪಾಸ್‌ಪೋರ್ಟ್ ಹಾಗೂ ಪಡೆದ ಹಣವನ್ನು ವಾಪಸ್ ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News