×
Ad

ತುರ್ತು ಪರಿಸ್ಥಿತಿ ಬಳಿಕ ಶಾಂತ ಸ್ಥಿತಿಗೆ ಮರಳುತ್ತಿರುವ ಟರ್ಕಿಯ ನಗರಗಳು

Update: 2016-07-23 00:19 IST

ಇಸ್ತಾಂಬುಲ್, ಜು. 22: ಟರ್ಕಿಯ ಸಂಸತ್ತು ದೇಶದಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿಗೆ ಅನುಮೋದನೆ ನೀಡಿದ ಒಂದು ದಿನದ ಬಳಿಕ, ಶುಕ್ರವಾರ ದೇಶದ ಪ್ರಮುಖ ನಗರಗಳ ಬೀದಿಗಳಲ್ಲಿ ಶಾಂತ ಪರಿಸ್ಥಿತಿ ನೆಲೆಸಿದೆ.

ಕಳೆದ ವಾರ ದೇಶದಲ್ಲಿ ನಡೆದ ವಿಫಲ ಸೇನಾ ದಂಗೆಯ ಹಿನ್ನೆಲೆಯಲ್ಲಿ, ಬಂಧನಾವಧಿಯನ್ನು ವಿಸ್ತರಿಸಲು ಹಾಗೂ ಆದೇಶಗಳನ್ನು ಹೊರಡಿಸಲು ತುರ್ತು ಪರಿಸ್ಥಿತಿಯು ಸರಕಾರಕ್ಕೆ ಅವಕಾಶ ಮಾಡಿಕೊಡಲಿದೆ.

ಆದಾಗ್ಯೂ, ದೇಶದಲ್ಲಿ ಉದ್ವಿಗ್ನತೆ ಇನ್ನೂ ನೆಲೆಸಿದೆ ಎಂಬುದರ ಸೂಚನೆಯಾಗಿ ಪ್ರತಿಭಟನಕಾರರು ಗುರುವಾರ ರಾತ್ರಿ ಅಂಕಾರದಲ್ಲಿರುವ ಎಟಿಮಸ್ಗಟ್ ಸೇನಾ ನೆಲೆಯ ಹೊರಗೆ ಟ್ರಕ್‌ಗಳು ಮತ್ತು ಒಂದು ಬುಲ್‌ಡೋಝರನ್ನು ಇರಿಸಿದರು. ಅಲ್ಲಿಂದ ಯುದ್ಧ ಟ್ಯಾಂಕ್‌ಗಳು ಹೊರಗೆ ಹೋಗಬಹುದು ಎಂಬ ಹೆದರಿಕೆಯ ಹಿನ್ನೆಲೆಯಲ್ಲಿ ಹೀಗೆ ಮಾಡಿರಬಹುದೆಂದು ಭಾವಿಸಲಾಗಿದೆ.

ದೇಶದಲ್ಲಿ ತುರ್ತು ಪರಿಸ್ಥಿತಿ ವಿಧಿಸುವ ಮಸೂದೆಗೆ ಸಂಸತ್ತು ಗುರುವಾರ 346-115 ಮತಗಳ ಅಂತರದಿಂದ ಅನುಮೋದನೆ ನೀಡಿತು. ಇದು ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರಿಗೆ ಹೆಚ್ಚುವರಿ ಅಧಿಕಾರಗಳನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News