ಆಸರೆ ವಿಮೆನ್ಸ್ ಫೌಂಡೇಶನ್‌ನ ಅಧ್ಯಕ್ಷೆಯಾಗಿ ಸಲ್ಮಾ ಉಮರ್ ಆಯ್ಕೆ
Update: 2016-07-23 00:20 IST
ಮಂಗಳೂರು: ಜು.22: ಟ್ಯಾಲೆಂಟ್ ರಿಸರ್ಚ್ ೌಂಡೇಶನ್‌ನ ಅಂಗ ಸಂಸ್ಥೆಯಾದ ಆಸರೆ ವಿಮೆನ್ಸ್ ೌಂಡೇಶನ್‌ನ ನೂತನ ಅಧ್ಯಕ್ಷೆಯಾಗಿ ಸಲ್ಮಾ ಉಮರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಶಬೀನಾ ಅಖ್ತರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಲಹೆಗಾರರಾಗಿ ಖೈರುನ್ನಿಸಾ ಸೈಯದ್ ಮತ್ತು ಝಾಹಿದಾ ಜಲೀಲ್, ಉಪಾಧ್ಯಕ್ಷೆಯಾಗಿ ಆತಿಕಾ ರಫೀಕ್, ಕಾರ್ಯದರ್ಶಿಯಾಗಿ ಮುಮ್ತಾಝ್ ಪಕ್ಕಲಡ್ಕ, ಕೋಶಾಕಾರಿಯಾಗಿ ಮುಮ್ತಾಝ್ ಹಕೀಮ್, ಸದಸ್ಯರಾಗಿ ಹಸೀನಾ ರ್ವೇಝ್, ಆಬಿದಾ ಬಾನು, ರುಕಿಯಾ ಅಲಿ, ಸೆಲಿಕಾ, ನಫೀಸಾ ಖಾಲಿದ್, ಆಸಿಯ ಮುಹಮ್ಮದ್, ಡಾ.ಾತಿಮಾ ಶಫೀಲಾ, ಝೊಹರಾ ಉಳ್ಳಾಲ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.