×
Ad

ಕಾಸರಗೋಡು: ಸರಕಾರಿ ಆಸ್ಪತ್ರೆಯಲ್ಲಿ ಸಿನೆಮಾ ಭಾಗ್ಯ!

Update: 2016-07-23 15:13 IST

ಕಾಸರಗೋಡು, ಜು.23: ಇನ್ನು ಮುಂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಗೆ ತಲುಪುವವರು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿ ಕುಳಿತುಕೊಳ್ಳಬೇಕಿಲ್ಲ. ಆಸ್ಪತ್ರೆಯಲ್ಲಿ ಕಾಯುವ ಜನರಿಗೆ ಚಿಕಿತ್ಸೆ ಲಭಿಸುವುದು ತಡವಾದರೆ, ಕುಳಿತು ಕಾಯುವ ಸಂದರ್ಭದಲ್ಲಿ ಸಿನೆಮಾ ನೋಡುವ ಮೂಲಕ ಮನರಂಜನೆ ಲಭ್ಯವಾಗಲಿದೆ. ಇಂತಹ ವಿನೂತನ ಯೋಜನೆಗೆ ಜನರಲ್ ಆಸ್ಪತ್ರೆಯ ಸಿಬ್ಬಂದಿ ಮುಂದಾಗಿದ್ದಾರೆ.

ಆಸ್ಪತ್ರೆಯಲ್ಲಿ ಸಿನೆಮಾ ಮೂಲಕ ಮನರಂಜನೆಯ ಜೊತೆಗೆ ರೋಗಗಳ ಕುರಿತು ಮಾಹಿತಿ ಕೂಡಾ ಲಭಿಸಲಿದೆ. ಜೊತೆಗೆ ಜಾಗೃತಿ ಮೂಡಿಸುವ ಕೈಪಿಡಿಗಳು ಲಭ್ಯವಾಗಲಿದೆ.

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಡೆಂಗ್, ಮಲೇರಿಯಾ, ಇಲಿಜ್ವರ, ಕ್ಯಾನ್ಸರ್, ಏಡ್ಸ್ ಮೊದಲಾದ ಹಲವು ಗಂಭೀರ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ತಲಾ 15 ನಿಮಿಷಗಳ ಸಿನಿಮಾಗಳನ್ನು ಪ್ರತಿದಿನ ಪ್ರದರ್ಶಿಸಲಾಗುತ್ತಿದೆ.

ಆಸ್ಪತ್ರೆಯ ಹೊರ ರೋಗಿಗಳ ಘಟಕ, ಮಕ್ಕಳ ವಾರ್ಡು ಮತ್ತು ಲ್ಯಾಬ್ ಮುಂಭಾಗದಲ್ಲಿ ಸೇರಿದಂತೆ ಮೂರು ಕಡೆಗಳಲ್ಲಿ ಟಿ.ವಿ. ಅಳವಡಿಸಲಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವವರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಉಂಟಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಮನರಂಜನೆ ಮತ್ತು ಜಾಗೃತಿ ಸಾಕಷ್ಟು ನೆರವಾಗಲಿದೆ. ರೋಗಿಗಳಿಗೆ ಜಾಗೃತಿ ಮತ್ತು ಮನರಂಜನೆ ನೀಡಲು ಮಾಡಲಾದ ಈ ವ್ಯವಸ್ಥೆ ಎಲ್ಲರ ಗಮನ ಸೆಳೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News