ಜುನೈದಾ ಸುಲ್ತಾನಾರಿಗೆ ಇಂಗ್ಲಿಷ್‌ನಲ್ಲಿ ಡಾಕ್ಟರೇಟ್ ಪದವಿ

Update: 2016-07-23 18:01 GMT

ಉಡುಪಿ, ಜು.23: ಜುನೈದಾ ಸುಲ್ತಾನಾ ಅವರು ಅಮೆರಿಕದ ಐನ್‌ಸ್ಟೈನ್ ಇಂಟರ್‌ನ್ಯಾಶನಲ್ ಯುನಿರ್ವಸಿಟಿಯಿಂದ ದೂರ ಶಿಕ್ಷಣದ ಮೂಲಕ ಇಂಗ್ಲಿಷ್ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಸಿಂಪಲ್ ರಿಯಾಲಿಟಿ ಆ್ಯಂಡ್ ರಿಯಲ್ ಲೈಫ್ ನ್ಯೂಯನ್ಸಸ್ ಇನ್ ನೋವೆಲ್ಸ್ ಆಫ್ ಚೇತನ್ ಭಗತ್ ಎಂಬ ವಿಷಯದಲ್ಲಿ ಜುನೈದಾ ಸುಲ್ತಾನಾ ಮಂಡಿಸಿರುವ ಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ನೀಡಲಾಗಿದೆ.

ಮಂಗಳೂರಿನ ನೂರುಲ್ಲಾ ಹಾಗೂ ಆಯಿಶಾ ನೂರ್ ದಂಪತಿಯ ಪುತ್ರಿಯಾಗಿರುವ ಜುನೈದಾ ಸುಲ್ತಾನಾ ಉಡುಪಿಯ ಉದ್ಯಮಿ ಯಾಸೀನ್ ಮಲ್ಪೆಯವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News