×
Ad

ಬಾವಿಗೆ ಬಿದ್ದು ಮೃತ್ಯು

Update: 2016-07-23 23:57 IST

ಹಿರಿಯಡ್ಕ, ಜು.23: ಬೈರಂಪಳ್ಳಿ ಗ್ರಾಮದ ಹುಲಿಕಲ್ ನಿವಾಸಿ ಬೋಗ್ರ ಹಾಂಡ ಎಂಬವರು ಶುಕ್ರವಾರ ಅಪರಾಹ್ನ ಮನೆಯ ಬಾವಿಯ ದಂಡೆಯ ಮೇಲೆ ಕುಳಿತು ವೀಳ್ಯದೆಲೆ ತಿನ್ನುವ ಸಂದರ್ಭ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಾರು: ವ್ಯಕ್ತಿ ನಾಪತ್ತೆ
ಕಾಪು, ಜು.23: ಮಲ್ಲಾರು ಗ್ರಾಮದ ಕೊಂಬಗುಡ್ಡೆ ನಿವಾಸಿ ಅಬ್ದುರ್ರಝಾಕ್ (47) ಮೇ 5ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಜು.23ರಂದು ಪ್ರಕರಣ ದಾಖಲಾಗಿದೆ.
23 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುರ್ರಝಾಕ್ ಹಿಂದೆಯೂ ಹಲವು ಬಾರಿ ಮನೆ ಬಿಟ್ಟು ತೆರಳಿದ್ದರು. ಅಲ್ಲದೆ 15 ದಿನ /ತಿಂಗಳಲ್ಲಿ ವಾಪಸಾಗುತ್ತಿದ್ದರು. ಆದರೆ ಈ ಬಾರಿ ಮನೆ ಬಿಟ್ಟು ಹೋಗಿ ಎರಡೂವರೆ ತಿಂಗಳಾದರೂ ವಾಪಸಾಗಿಲ್ಲ ಎಂದು ಅವರ ಮನೆಯವರು ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಣೆಯಾದ ಅಬ್ದುರ್ರಝಾಕ್ 5.8 ಅಡಿ ಎತ್ತರ, ಗೋದಿ ಮೈ ಬಣ್ಣ, ದುಂಡು ಮುಖ, ಕಪ್ಪು-ಬಿಳುಪು ಕೂದಲು ಹೊಂದಿದ್ದು ಕನ್ನಡ, ಹಿಂದಿ, ತುಳು, ಮಲಯಾಳಂ ಭಾಷೆ ಬಲ್ಲವರಾಗಿದ್ದಾರೆ. ಇವರನ್ನು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News